ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬರು ತಮ್ಮದೇ ಕಾರಿನೊಳಗೆ ಶವವಾಗಿ ಪತ್ತೆಯಾದ ಘಟನೆ ಪಂಜಾಬ್‌ನ ಆಸ್ಪತ್ರೆಯೊಂದರ ಪಾರ್ಕಿಂಗ್ ಏರಿಯಾದಲ್ಲಿ ನಡೆದಿದೆ.
ಕಮಲ್ ಕೌರ್ ನಿಗೂಢವಾಗಿ ಸಾವನ್ನಪ್ಪಿದ ಸೋಷಿಯಲ್ ಮೀಡಿಯಾ ಸ್ಟಾರ್. ಕಮಲ್ ಕೌರ್ ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಿನ ಹಿಂಬದಿ ಸೀಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
‘ಕಮಲ್ ಕೌರ್ ಭಾಬಿ’ ಎಂಬ ಹೆಸರಿನಿಂದ ಫೇಮಸ್ ಆಗಿದ್ದ ಕಮಲ್, ಇನ್ಸ್ಟಾಗ್ರಾಂನಲ್ಲಿ 3.83 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಅಲ್ಲದೇ ಅಶ್ಲೀಲ ಭಾಷೆಯನ್ನು ಬಳಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದಕ್ಕೆ ಹೆಸರುವಾಸಿಯಾಗಿದ್ದು, ಹಲವು ವಿವಾದಕ್ಕೀಡಾಗಿದ್ದರು. ನಿಲ್ಲಿಸಿದ್ದ ಕಾರಿನಿಂದ ಕೆಟ್ಟ ವಾಸನೆ ಬರುತ್ತಿರುವುದರ ಕುರಿತು ಪೊಲೀಸರಿಗೆ ಮಾಹಿತಿ ದೊರೆತ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.