ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅ.25 ರಂದು ಭಕ್ತರಿಗೆ ದೇವರ ದರುಶನಕ್ಕೆ ಅವಕಾಶವಿಲ್ಲವೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಅ.25 ರಂದು ಸೂರ್ಯಗ್ರಹಣ ಹಾಗಾಗಿ ಆ ದಿನ ಮಧ್ಯಾಹ್ನ 2.30 ರಿಂದ ರಾತ್ರಿ 7.30 ರ ವರೆಗೆ ದೇವರ ದರುಶನಕ್ಕೆ ಅವಕಾಶವಿರುವುದಿಲ್ಲ.ಅನ್ನಪ್ರಸಾದವು ಮಧ್ಯಾಹ್ನ 2.30 ಕ್ಕೆ ಕೊನೆಗೊಂಡು ರಾತ್ರಿ 7.30 ರ ಬಳಿಕವೆ ನಡೆಯಲಿದೆ.
ಅ.25 ರಂದು ಸಂಜೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅ. 26 ರಿಂದ ಎಂದಿನಂತೆ ದೇವರ ದರುಶನಕ್ಕೆ ಅವಕಾಶ ಇರಲಿದೆ.