ಹೊಸದಿಗಂತ ವರದಿ ಚಾಮರಾಜನಗರ :
ಚಾಮರಾಜನಗರದ ಅರಕಲವಾಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಜಿ.ಪಂ.ಮಾಜಿ ಸದಸ್ಯ ಎಸ್.ಸೋಮನಾಯಕ ಅವರ ನೇತೃತ್ವದಲ್ಲಿ ಸಮುದಾಯದ ಮುಖಂಡರು ಭಾರೀ ಗಾತ್ರದ ಹಾರ ಹಾಕಿ ವೀಳ್ಯದ ಜೊತೆಗೆ ವೈಯುಕ್ತಿಕ 10. ಸಾವಿರ ರೂ.ನೀಡಿ ಸಂಪೂರ್ಣ ಬೆಂಬಲ ಘೋಷಿಸಿದರು.
ಗ್ರಾಮದ ನಾಯಕ ಬೀದಿಯ ಚಾವಡಿಗೆ ಆಗಮಿಸುತ್ತಿದ್ದಂತೆ ಮುಖಂಡರು ಪುಟ್ಟರಂಗಶೆಟ್ಟಿ ಪರ ಪರ ಘೋಷಣೆ ಕೂಗಿದರು. ಈ ವೇಳೆ ಜಿ.ಪಂ.ಸದಸ್ಯ ಎಸ್.ಸೋಮನಾಯಕ ಮಾತನಾಡಿ, ಶಾಸಕ ಸಿ. ಪುಟ್ಟರಂಗಸೆಟ್ಟಿ ಅವರು ಸರಳ ವ್ಯಕ್ತಿತ್ವವುಳ್ಳವರಾಗಿದ್ದು, ಮೂರು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ. ವಿಶೇಷವಾಗಿ ನಾಯಕ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ನಾಲ್ಕನೆಯ ಬಾರಿಯು ಗೆಲುವು ಖಚಿತವಾಗಿದ್ದು, ಈ ಚುನಾವಣೆಯಲ್ಲಿ ಗ್ರಾಮದ ನಾಯಕ ಸಮಾಜದಿಂದ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಎಸ್ ಟಿ ವಿಭಾಗದ ಜಿಲ್ಲಾ ಅಧ್ಯಕ್ಷ ಮಹದೇವನಾಯಕ, ರಾಜ್ಯಾ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ವಕೀಲ ಮಾಧು, ಗುರುಸಿದ್ದನಾಯಕ, ಗುಜ್ಜನಾಯಕ, ವೆಂಕಟನಾಯಕ, ಸಿದ್ದನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಇತರರು ಹಾಜರಿದ್ದರು.