ಸೋಮಶೇಖರ್ ಭಟ್ ವಿಧಿವಶ: ಪೇಜಾವರ ಶ್ರೀ ತೀವ್ರ ಸಂತಾಪ

ಹೊಸದಿಗಂತ ವರದಿ, ಮಂಗಳೂರು:

ಆರೆಸ್ಸೆಸ್‌ನ ಹಿರಿಯ ಸ್ವಯಂಸೇವಕ, ಬಿಜೆಪಿಯ ಹಿರಿಯ ನಾಯಕ, ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ ಎಂ . ಸೋಮಶೇಖರ್ ಭಟ್ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಕಂಬನಿ ಮಿಡಿದಿದ್ದಾರೆ.

ರಾಷ್ಟ್ರ ನಿಷ್ಠೆ ಮತ್ತು ರಾಮ‌ ನಿಷ್ಠೆ ಅನುಪಮವಾದುದು. ರಾಜಕಾರಣದಲ್ಲಿ ನಿಷ್ಠೆ ಪ್ರಾಮಾಣಿಕತೆಯ ಮೌಲ್ಯವನ್ನು ಪ್ರತಿನಿಧಿಸಿದವರು. ಸಂಘದ ತತ್ವಗಳಿಗೆ ತಮ್ಮನ್ನು ಅರ್ಪಿಸಿಕೊಂಡವರು . ಅವರ ಆತ್ಮಕ್ಕೆ ಸದ್ಗತಿಯನ್ನು ಅಯೋಧ್ಯೆ ರಾಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ತೀವ್ರ ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here