ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರು ಸುಮ್ಮನೆ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡ್ತಾರೆ, ಆದರೆ ಅದು ಕೇವಲ ಪುಸ್ತಕವಲ್ಲಿ ಸ್ಪೂರ್ತಿಯ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಂಗಳವಾರ ವಿಪಕ್ಷಗಳ ವಿರುದ್ಧ ಲೋಕಸಭೆಯಲ್ಲಿ ಗುಡುಗಿದ್ದ ಪ್ರಧಾನಿ ಇಂದು ರಾಜ್ಯಸಭೆಯಲ್ಲಿ ವಾಗ್ದಾಳಿ ಮುಂದುವರಿಸಿದರು. ಕಳೆದ ಎರಡು ದಿನಗಳಲ್ಲಿ 70 ಸಂಸದರು ವಿಚಾರ ಮಂಡಿಸಿದ್ದಾರೆ. ಚರ್ಚೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಬಹು ದಶಕಗಳ ಬಳಿಕ ಒಂದೇ ಸರ್ಕಾರಕ್ಕೆ ಮೂರನೇ ಬಾರಿಗೆ ಅವಕಾಶ ನೀಡಲಾಗಿದೆ. 10 ವರ್ಷಗಳ ಬಳಿಕ ಮತ್ತೆ ಅಧಿಕಾರದ ಬರುವುದು ಸಾಮಾನ್ಯವಲ್ಲ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಸಂವಿಧಾನದ ಪರಿಣಾಮ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಮತ್ತೆ ಗೆದ್ದು ಬರಲು ಸಾಧ್ಯವಾಗಿದೆ. ಸಂವಿಧಾನ ಕೇವಲ ಪುಸ್ತಕವಲ್ಲ, ಸ್ಫೂರ್ತಿಯ ಸಂಕೇತವಾಗಿದೆ. ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತದೆ. ಕೆಲವರು ಸಂವಿಧಾನ ಪುಸ್ತಕ ಹಿಡಿದು ಮಾತ್ರ ತಿರುಗುತ್ತಾರೆ ಎಂದು ಉತ್ತರ ನೀಡಿದ್ದಾರೆ.