ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸಗೊಬ್ಬರ ಸಮಸ್ಯೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ, ಇದೇ ವೇಳೆ ಏಪ್ರಿಲ್‌ನಿಂದ ರಸಗೊಬ್ಬರ ಇಲಾಖೆಗೆ ಅಗತ್ಯವಿರುವ ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳನ್ನು ಪೂರೈಸುವಂತೆ ಕೋರಿ ಆರು ಪತ್ರಗಳನ್ನು ಬರೆದಿರುವುದಾಗಿ ರಾಜ್ಯಕೃಷಿ ಇಲಾಖೆ ತಿಳಿಸಿದೆ.
ಕೃಷಿ ಇಲಾಖೆಯು ಪತ್ರಗಳನ್ನು ಬರೆದಿರುವುದಾಗಿ ಹೇಳಿಕೊಂಡಿದೆ. ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ವಾರಕ್ಕೊಮ್ಮೆ ನಡೆಯುವ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿಯೂ ಸಹ, ಅಧಿಕಾರಿಗಳು ಕೇಂದ್ರದ ಅಧಿಕಾರಿಗಳನ್ನು ಯೂರಿಯಾ ಮತ್ತು ಇತರ ರಸಗೊಬ್ಬರಗಳನ್ನು ಪೂರೈಸುವಂತೆ ವಿನಂತಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕವು ಮುಂಗಾರು ಆರಂಭದಲ್ಲಿ ಉತ್ತಮ ಮಳೆಯನ್ನು ಪಡೆದಿದೆ ಮತ್ತು ಬಿತ್ತನೆ ಸಾಮಾನ್ಯಕ್ಕಿಂತ ಮೊದಲೇ ಪ್ರಾರಂಭವಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಬಾರಿ 2 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬಿತ್ತಿನೆ ಮಾಡಲಾಗಿದೆ. ಹೀಗಾಗಿ ರಸಗೊಬ್ಬರಗಳಿಗೆ ಗಮನಾರ್ಹವಾಗಿ ಬೇಡಿಕೆ ಹೆಚ್ಚಿದೆ.