ಯಶವಂತಪುರ ರೈಲ್ವೆ ನಿಲ್ದಾಣದಿಂದ ಕೆಲವು ರೈಲುಗಳ ಸಂಚಾರ ರದ್ದು, ಟರ್ಮಿನಲ್ & ಮಾರ್ಗ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಶವಂತಪುರ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಅಲ್ಲದೆ ತಾತ್ಕಾಲಿಕವಾಗಿ ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೇ ಇಲಾಖೆ ವಿಭಾಗೀಯ ಕಚೇರಿ ಮಾಹಿತಿ ನೀಡಿದೆ.

ಯಾವ್ಯಾವ ರೈಲುಗಳು ರದ್ದು?
ಏ.4 – ರೈ.ಸಂಖ್ಯೆ 12291 ಯಶವಂತಪುರ-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌
ಏ.5 – ರೈ.ಸಂಖ್ಯೆ 12292 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್‌
ಏ.4 – ರೈ.ಸಂಖ್ಯೆ 16573 ಯಶವಂತಪುರ-ಪುದುಚೇರಿ ಎಕ್ಸ್‌ಪ್ರೆಸ್‌
ಏ.5 – ರೈ.ಸಂಖ್ಯೆ 16574 ಪುದುಚೇರಿ-ಯಶವಂತಪುರ ಎಕ್ಸ್‌ಪ್ರೆಸ್‌
ಏ.5 – ರೈ.ಸಂಖ್ಯೆ 16577 ಯಶವಂತಪುರ-ಬೀದರ್ ಎಕ್ಸ್‌ಪ್ರೆಸ್‌
ಏ.6 – ರೈ.ಸಂಖ್ಯೆ 16578 ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌
ಏ.3 & ಏ.10 – ರೈಲು ಸಂಖ್ಯೆ 16541 ಯಶವಂತಪುರ-ಪಂಢರಪುರ ಎಕ್ಸ್‌ಪ್ರೆಸ್‌
ಏ.4 & ಏ.11 – ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ ಎಕ್ಸ್‌ಪ್ರೆಸ್‌

ರೈಲುಗಳ ಟರ್ಮಿನಲ್ ಮತ್ತು ಮಾರ್ಗ ಬದಲಾವಣೆ:
ರೈಲು ಸಂಖ್ಯೆ 16511/16512 ಕೆಎಸ್‌ಆರ್ ಬೆಂಗಳೂರು ಹಾಗೂ ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳ ಟರ್ಮಿನಲ್ ಮತ್ತು ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 8:00 ಗಂಟೆಗೆ ಹೊರಟು, ಬಾಣಸವಾಡಿ, ಹೆಬ್ಬಾಳ ಮತ್ತು ಚಿಕ್ಕಬಾಣಾವರ ಮಾರ್ಗದ ಮೂಲಕ ಸಂಚರಿಸಲಿದೆ. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಚಿಕ್ಕಬಾಣಾವರ, ಹೆಬ್ಬಾಳ, ಬಾಣಸವಾಡಿ ಮಾರ್ಗದ ಮೂಲಕ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರಿನ ಬದಲು ಎಸ್‌ಎಂವಿಟಿಯಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಈ ರೈಲು ಬೆಳಿಗ್ಗೆ 07:45ಕ್ಕೆ ಎಸ್‌ಎಂವಿಟಿಯಿಂದ ಬೆಂಗಳೂರಿಗೆ ಆಗಮಿಸಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!