ಹೊಸದಿಗಂತ ವರದಿ ಮಡಿಕೇರಿ:
ಬೆಳೆಗಾರರೊಬ್ಬರು ಗುಂಡೇಟಿಗೆ ಬಲಿಯಾಗಿರುವ ಘಟನೆ ಸಿದ್ದಾಪುರ ಸಮೀಪದ ಅಭ್ಯತ್’ಮಂಗಲದ ಗ್ರಾಮದಲ್ಲಿ ನಡೆದಿದೆ.
ನಂಜರಾಯಪಟ್ಟಣ ನಿವಾಸಿ ಕೊಳಂಬೆ ವಿನು ಬೆಳ್ಯಪ್ಪ ಎಂಬವರೇ ಗುಂಡೇಟಿಗೆ ಬಲಿಯಾದವರಾಗಿದ್ದಾರೆ.
ಕಾಫಿ ಬೆಳೆಗಾರರಾಗಿರುವ ಕೊಳಂಬೆ ವಿನು ಬೆಳ್ಯಪ್ಪ ಅವರು ಅಭ್ಯತ್ ಮಂಗಲದಲ್ಲಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಯಾರೋ ಹಿಂಬದಿಯಿಂದ ಗುಂಡು ಹಾರಿಸಿ ಸಾಯಿಸಿರುವುದಾಗಿ ಹೇಳಲಾಗಿದೆ.
ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬೇಕೆಂದು ಶಂಕಿಸಲಾಗಿದ್ದು, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.