ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಪದ ಭರದಲ್ಲಿ ಪತ್ನಿಯೊಬ್ಬಳು ಗಂಡನ ಮೇಲೆ ಕೊತ ಕೊತ ಕುದಿಯುತ್ತಿದ್ದ ಎಣ್ಣೆಯನ್ನು ಸುರಿದಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಕೃಷ್ಣಪುರಂನ ಆಟೋ ಚಾಲಕ ಬಾಲಸುಬ್ರಮಣಿಯನ್ (42). ಆತನ ಪತ್ನಿ ಮುತ್ತುಲಕ್ಷ್ಮಿ (34). ಈ ದಂಪತಿಗೆ 3 ಹೆಣ್ಣು ಮತ್ತು ಒಬ್ಬ ಗಂಡು ಮಗ ಇದ್ದಾರೆ.
ಗಂಡ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂದು ಅನುಮಾನಗೊಂಡಿದ್ದ ಮುತ್ತುಲಕ್ಷ್ಮಿ ಆತನೊಂದಿಗೆ ಈ ಹಿಂದೆ ಹಲವು ಬಾರಿ ಜಗಳ ಮಾಡಿದ್ದಾಳೆ. ಇತ್ತೀಚಿಗಷ್ಟೇ 25 ದಿನಗಳ ಹಿಂದೆಯೂ ಮುತ್ತುಲಕ್ಷ್ಮಿ ಜಗಳವಾಡಿ ತನ್ನ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು.
ಈ ಸಂಬಂಧ ನೆಲ್ಲೈ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ನಂತರ, ಪೊಲೀಸರು ಇಬ್ಬರನ್ನೂ ಕರೆಸಿ ರಾಜಿ ಮಾತುಕತೆ ಮಾಡಿಸಿದ್ದಾರೆ. ಅದರಂತೆ ಮುತ್ತುಲಕ್ಷ್ಮಿ ನಾಲ್ಕು ದಿನಗಳ ಹಿಂದೆ ತನ್ನ ಗಂಡನ ಮನೆಗೆ ಹೋಗಿದ್ದಾಳೆ. ಈ ಪರಿಸ್ಥಿತಿಯಲ್ಲಿ, ನಿನ್ನೆ ಬೆಳಿಗ್ಗೆ, ಮೇ 30 ರಂದು ಮತ್ತೆ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ತಾರಕಕ್ಕೇರಿದ್ದು, ಏಕಾಏಕಿ ಅಡುಗೆ ಮನೆಗೆ ಹೋದ ಮುತ್ತುಲಕ್ಷ್ಮಿ ಕೊತ ಕೊತ ಕುದಿಯುತ್ತಿದ್ದ ಎಣ್ಣೆಯನ್ನು ತದ್ದು ಸುಬ್ರಮಣಿಯನ್ ಮೇಲೆ ಹಾಕಿದ್ದಾಳೆ.
ಪರಿಣಾಮವಾಗಿ, ನೋವಿನಿಂದ ಕಿರುಚುತ್ತಿದ್ದ ಬಾಲಸುಬ್ರಮಣಿಯನ್ಯನ್ನು ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಂತಿಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುತ್ತುಲಕ್ಷ್ಮಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.