ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಯೋಪಿಕ್, ಐತಿಹಾಸಿಕ ಚಿತ್ರಗಳು ಹೆಚ್ಚು ಬರುತ್ತಿವೆ. ಬಾಲಿವುಡ್‌ನಿಂದ ಮತ್ತೊಂದು ಕುತೂಹಲಕಾರಿ ಸಿನಿಮಾ ಬರುತ್ತಿದೆ. ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇಗುಲದ ಕುರಿತು ಸಿನಿಮಾ ನಿರ್ಮಾಣವಾಗಲಿದೆ.
ಸೋಮನಾಥ ದೇಗುಲದ ಕುರಿತ ಸಿನಿಮಾವನ್ನು ಪ್ರಕಟಿಸುವ ವಿಡಿಯೋ ಕೂಡ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ.. ಸತ್ಯಯುಗದಲ್ಲಿ ಚಂದ್ರನಿಂದ, ತ್ರೇತಾಯುಗದಲ್ಲಿ ರಾವಣಾಸುರನಿಂದ, ದ್ವಾಪರ ಯುಗದಲ್ಲಿ ಕೃಷ್ಣನಿಂದ ಪೂಜಿಸಲ್ಪಟ್ಟ ಮೊದಲ ಜ್ಯೋತಿರ್ಲಿಂಗ ಸೋಮನಾಥ. ಆದರೆ ಕಲಿಯುಗದಲ್ಲಿ ಮುಹಮ್ಮದ್ ಘಜಿನಿ ಕ್ರಿ.ಶ.1025ರಲ್ಲಿ ದೇವಾಲಯದ ಮೇಲೆ ದಾಳಿ ಮಾಡಿದ. ಅನೇಕ ಸಾಮಾನ್ಯ ಭಕ್ತರು ಆ ದಾಳಿಯನ್ನು ಎದುರಿಸಿ ಪ್ರಾಣ ತ್ಯಾಗ ಮಾಡಿದರು. ನಂತರ ದೇವಾಲಯವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ದೇವಲಾಯನ್ನು ಜೀರ್ಣೋದ್ದಾರ ಮಾಡಿರುವ ದೃಶ್ಯಗಳನ್ನು ತೋರಿಸಲಾಗಿದೆ.
ಚಿತ್ರಕ್ಕೆ ʻದಿ ಬ್ಯಾಟಲ್ ಸ್ಟೋರಿ ಆಫ್ ಸೋಮನಾಥ್ʼ ಎಂದು ಹೆಸರಿಡಲಾಗಿದೆ. ಮನೀಷ್ ಮಿಶ್ರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅನುಪ್ ತಾಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ದ್ವಿಭಾಷಾ ಪ್ರಾಜೆಕ್ಟ್ ಆಗಿ ತಯಾರಾಗಲಿದೆ. ಈ ಎರಡು ಭಾಷೆಗಳಲ್ಲದೆ, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಮರಾಠಿ, ಬೆಂಗಾಲಿ, ಅಸ್ಸಾಮಿ, ಒಡಿಯಾ, ಪಂಜಾಬಿ ಮತ್ತು ನೇಪಾಳಿ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಹಾಗಾಗಿ ಶಿವನ ಭಕ್ತರು ಹಾಗೂ ಇತಿಹಾಸದಲ್ಲಿ ಆಸಕ್ತಿ ಇರುವವರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.