ಹೊಸದಿಗಂತ ವರದಿ ಹುಬ್ಬಳ್ಳಿ:
ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸ್ವತಃ ಮಗನೇ ತಂದೆ ಹಾಗೂ ಮಲತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧಿಸಿ ಮತ್ತೋರ್ವನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಬಾಗಲಕೋಟ ಜಿಲ್ಲೆ ಬಾಡಗಿ ಗ್ರಾಮದ ಮಲ್ಲನ ಗೌಡ ಪಾಟೀಲ ಬಂಧಿತ ಆರೋಪಿ. ಕೊಲೆ ಮಾಡಿದ ಆರೋಪಿಯ ಮಾವನಾಗಿದ್ದಾನೆ. ಇವರ ಕುಮ್ಮಕ್ಕಿನಿಂದ ಗಂಗಾಧರ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಜ. 9 ರಂದು (ಗುರುವಾರ) ರಾತ್ರಿ ಆಸ್ತಿ ವಿಚಾರಕ್ಕೆ ಗಂಗಾಧರ ಕೊಬ್ಬನವರ ತಂದೆ ಅಶೋಕ ಹಾಗೂ ಮಲತಾಯಿ ಶಾರದಮ್ಮ ಅವರನ್ನು ಹತ್ಯೆ ಮಾಡಿದ್ದ. 24 ಗಂಟೆಯಲ್ಲಿ ಆರೋಪಿಯನ್ನು ಗ್ರಾಮೀಣ ಪೊಲೀಸರು ಇಲ್ಲಿಯ ಕುಸುಗಲ್ ರಸ್ತೆ ಕೇಶ್ವಾಪುರದ ಬಳಿ ಬಂಧಿಸಿದ್ದರು. ಈ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.