ಮೊಬೈಲ್‌ ಕೊಡಿಸಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಮಗ, ಅದೇ ಹಗ್ಗಕ್ಕೆ ನೇಣು ಬಿಗಿದು ತಂದೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಂದೆ ಮೊಬೈಲ್ ಕೊಡಿಸದ್ದಕ್ಕೆ ಮಗ ನೇಣಿಗೆ ಶರಣಾಗಿದ್ದು, ಮಗನ ಸಾವಿನಿಂದ ನೊಂದು ತಂದೆಯೂ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಸೂಸೈಡ್‌ ಮಾಡಿಕೊಂಡ ಘಟನೆ ಮಹಾರಾಷ್ಟ್ರದ  ನಾಂದೇಡ್‌ನಲ್ಲಿ ನಡೆದಿದೆ.

ಮಗ ಬುಧವಾರ ಸಂಜೆ ಮೊಬೈಲ್ ಕೊಡಿಸುವಂತೆ ತಂದೆ ಬಳಿ ಹಠ ಮಾಡಿದ್ದಾನೆ. ಆದರೆ ತಂದೆ ತಾನು ಜಮೀನು ಹಾಗೂ ವಾಹನಕ್ಕೆ ಪಡೆದ ಸಾಲವನ್ನು ಮರುಪಾವತಿಸಬೇಕಿದ್ದು, ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ.

ಮಗ ಮನೆಗೆ ವಾಪಸ್ ಬಾರದ್ದನ್ನು ಕಂಡು ತಂದೆ ಜಮೀನಿನ ಬಳಿ ತೆರಳಿದಾಗ ಮಗ ನೇಣಿಗೆ ಶರಾಣಾಗಿರುವುದು ಕಂಡುಬಂದಿದೆ. ಇದರಿಂದ ಆಘಾತಗೊಂಡ ತಂದೆ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಮಂದಿ ಇವರನ್ನು ಹುಡುಕಿಕೊಂಡು ಜಮೀನಿನ ಬಳಿ ತೆರಳಿದಾಗ ಇಬ್ಬರೂ ಒಂದೇ ಹಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here