Monday, November 17, 2025

ತಾಯಿಯ ಸಾವಿನಿಂದ ಮನನೊಂದು ಕೆರೆಗೆ ಹಾರಿ ಮಗ ಆತ್ಮಹತ್ಯೆ

ಹೊಸದಿಗಂತ ವರದಿ,ಮಂಡ್ಯ :

ಕೆಲವು ತಿಂಗಳುಗಳ ಹಿಂದೆ ತಾಯಿ ಮರಣ ಹೊಂದಿದ್ದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಮಗ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕು ದೇವಿರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹನೂರು ತಾಲೂಕು ಬಂಡಹಳ್ಳಿ ಗ್ರಾಮದ ನವೀನ್‌ಕುಮಾರ್ (25) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಬಂಡಳ್ಳಿ ಗ್ರಾಮದ ಬಳಿ ಇರುವ ಶಾಗ್ಯ ಗ್ರಾಮದ ವಾಸಿ ಪರಶಿವಮೂರ್ತಿ ಎಂಬುವರ ಮಗನಾದ ನವೀನ್‌ಕುಮಾರ್ ಬೆಂಗಳೂರಿನಲ್ಲಿ ಜೀವನೋ ಪಯೋಗಕ್ಕಾಗಿ ಕೆಲಸ ಮಾಡಿಕೊಂಡಿದ್ದನು .ಕೆಲವು ತಿಂಗಳುಗಳ ಹಿಂದೆ ಅವರ ತಾಯಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು ಈತ ತಮ್ಮ ಸ್ವಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯ ಸಿಗುವ ಹಲಗೂರು ಸಮೀಪದ ದೇವಿರಹಳ್ಳಿ ಕೆರೆಯ ಬಳಿ ತಮ್ಮ ವಾಹನವನ್ನು ನಿಲ್ಲಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

error: Content is protected !!