ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪತ್ನಿ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸ್ನೇಹಿತೆಯರ ಜೊತೆ ದೇಗುಲಕ್ಕೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್ ಅವರು, ಮೂಕಾಂಬಿಕೆಯ ದರುಶನ ಪಡೆದರು. ಈ ವೇಳೆ ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ.
ತಮಿಳುನಾಡು ಸರ್ಕಾರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮದ ಕುರಿತು ನಿರಂತರ ಟೀಕೆಯನ್ನು ಮಾಡುತ್ತಿದ್ದಾರೆ. ಸನಾತನ ಧರ್ಮ, ಸಮಾಜದಲ್ಲಿ ಅಸಮಾನತೆಯನ್ನು ಹುಟ್ಟು ಹಾಕಿದೆ ಎಂದು ವಿರೋಧಿಸಿಕೊಂಡು ಬರುತ್ತಲೇ ಇದ್ದಾರೆ.ಇನ್ನೊಂದು ಕಡೆ, ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆ ಯಾಗಿರುವ ದುರ್ಗಾ (ಶಾಂತಾ) ಸ್ಟಾಲಿನ್, ಮನೆಯವರ ವಿಚಾರಧಾರೆಯ ಹೊರತಾಗಿಯೂ ಅಪ್ಪಟ ಆಸ್ತಿಕರಾಗಿದ್ದಾರೆ. ದೇಗುಲಕ್ಕೆ ನಿರಂತರ ಭೇಟಿ ನೀಡುತ್ತಾ ಬಂದಿದ್ದಾರೆ. ಈ ಹಿಂದೆ ಕೂಡಾ, ಸ್ಟಾಲಿನ್ ಅವರ ಪತ್ನಿ, ಹಲವು ದೇವಸ್ಥಾನಗಳಿಗೆ ಭೇಟಿಯನ್ನು ನೀಡಿದ್ದರು.