ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮ್ಮ ಖರ್ಚಿಗೆ ಹಣ ಕೊಡ್ತಿಲ್ಲ ಎಂದು ಮಗನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನನ್ನಿವಾಳ ರಸ್ತೆಯಲ್ಲಿ ನಡೆದಿದೆ. 34 ವರ್ಷದ ಮಹೇಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಚಳ್ಳಕೆರೆಯ ಮಹೇಶ್ ತಾಯಿ ಗಂಗಮ್ಮ ಜಮೀನು ಮಾರಾಟ ಮಾಡಿದ್ದರು. ಕಳೆದ ವಾರ ಕಾರು ಖರೀದಿ ಮಾಡಬೇಕು ಅಂತ ಮಹೇಶ್, ತಾಯಿ ಗಂಗಮ್ಮ ಬಳಿ 4 ಲಕ್ಷ ರೂಪಾಯಿ ಹಣ ಪಡೆದಿದ್ದ. ಮತ್ತೆ 2 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಆದ್ರೆ ಹಣ ಕೊಡಲು ವಿಳಂಬವಾಗಿದ್ರಿಂದ ಮಹೇಶ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಇದನ್ನೂ ಓದಿ: Snacks Series 27 | ಡೋನಟ್ ನೋಡಿ ಮಕ್ಕಳು ಬೇಕು ಅಂತ ಹಠ ಮಾಡ್ತಾರಾ? ಹಾಗಿದ್ರೆ ಮನೆಯಲ್ಲೇ ಮಾಡಿ ಹೆಲ್ದಿ ಸ್ಟೈಲ್ ನಲ್ಲಿ
ಕೂಡಲೇ ಗಾಯಾಳನ್ನ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮಗನ ಪರಿಸ್ಥಿತಿ ನೆನೆದು ತಾಯಿ ಆಸ್ಪತ್ರೆ ಮುಂಭಾಗದಲ್ಲಿ ಕಣ್ಣೀರು ಹಾಕ್ತಿದ್ದಾರೆ.

