ನಿನ್ನೆಯಷ್ಟೇ ಹುಷಾರಿಲ್ಲ ಬನ್ನಿ ಎಂದು ಕರೆ ಮಾಡಿದ್ದ ಮಗ ಇನ್ನಿಲ್ಲ! ಬೆಂಗಳೂರಿನಲ್ಲಿ ಯುವಕ ಆತ್ಮಹತ್ಯೆ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ ಯುವಕನೊಬ್ಬ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ.
ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ನಿವಾಸಿ ಸುರೇಶ್ ಹಾಗೂ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ಅವರ ಪುತ್ರ ಗಗನ್ (21) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಗಗನ್, ಕಳೆದ ಎರಡು ದಿವಸಗಳಿಂದ ತಾಯಿಗೆ ಕರೆ ಮಾಡಿ, ನನಗೆ ಹುಷಾರಿಲ್ಲ, ಬನ್ನಿ ಎಂದು ಪದೇ ಪದೇ ಕರೆದಿದ್ದರು ಎನ್ನಲಾಗಿದೆ.

ಈ‌ ಹಿನ್ನೆಲೆಯಲ್ಲಿ ಚಂದ್ರಾವತಿ ಬುಧವಾರ ರಾತ್ರಿ ಬೆಂಗಳೂರಿಗೆ ಪ್ರಯಾಣಿಸಿದ್ದರು. ತಾನು ಬರುತ್ತಿರುವ ವಿಷಯವನ್ನು ಮಗನಿಗೂ ತಿಳಿಸಿದ್ದರು. ಆದರೆ ಚಂದ್ರಾವತಿ ಅವರು ಬೆಂಗಳೂರು ತಲುಪುವ ಮೊದಲೇ ಪುತ್ರ ಗಗನ್ ನೇಣು ಬಿಗಿದು ಇಹಲೋಕ ತ್ಯಜಿಸಿರುವುದು ಗೋಚರಿಸಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!