ಇಳಿಕೆಯಾಗದ ಟೊಮ್ಯಾಟೊ ದರ: ಟ್ರೆಂಡ್‌ ಸೃಷ್ಟಿಸುತ್ತಿದೆ ಈ ಹಾಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈರುಳ್ಳಿ ಕತ್ತರಿಸಿದರೆ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಟೊಮ್ಯಾಟೊ ಬೆಲೆ ಕೇಳಿದರೆ ಕಣ್ಣೀರು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಟೊಮೇಟೊ ಬೆಲೆ 100ರಿಂದ 200ಕ್ಕೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಟೊಮ್ಯಾಟೊ ಬೆಲೆ ಏರಿಕೆ ಕುರಿತಂತೆ ವಿವಿಧ ಮೀಮ್‌ಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ವೈರಲ್‌ ಆಗುತ್ತಿರುವ ಟೊಮ್ಯಾಟೊ ಹಾಡು ಎಲ್ಲರನ್ನು ಆಕರ್ಷಿಸುತ್ತಿದೆ. ನೀವೂ ನೋಡಿ ಆನಂದಿಸಿ..

ಟೊಮ್ಯಾಟೊ ಇಲ್ಲದ ಸಾಂಬಾರ್..ಪಾವ್ ಬಾಜಿ..ಚಿಕನ್ ಕರಿ, ಸೂಪರ್‌ ಆಗಿರುತ್ತೆ ಎಂದು ಊಹಿಸಬಹುದೇ? ಟೊಮ್ಯಾಟೊ ಇಲ್ಲದೆ ಯಾವುದೇ ಆಹಾರ ರುಚಿ ಇರುವುದಿಲ್ಲ. ಈಗ ಟೊಮ್ಯಾಟೊ ಶ್ರೀಮಂತರಿಗೆ ಮಾತ್ರ ಸಿಗುವಂತಿದೆ. ಜನಸಾಮಾನ್ಯರು ಮರೆವಿನ ಸ್ಥಿತಿಯಲ್ಲಿದ್ದಾರೆ.

ಕೋಲ್ಕತ್ತಾದಲ್ಲಿ ಕೆಜಿಗೆ ರೂ.152, ದೆಹಲಿಯಲ್ಲಿ ರೂ.120, ಚೆನ್ನೈನಲ್ಲಿ ರೂ.117 ಮತ್ತು ಮುಂಬೈನಲ್ಲಿ ರೂ.108 ಆಗಿದೆ. ಬೆಂಗಳೂರಿನಲ್ಲಿ ರೂ.110, ವಾರಣಾಸಿಯಲ್ಲಿ ರೂ.107, ಹೈದರಾಬಾದ್‌ನಲ್ಲಿ ರೂ.98 ಮತ್ತು ಭೋಪಾಲ್‌ನಲ್ಲಿ ರೂ.90 ಆಗಿದೆ. ಬೆಲೆ ಏರಿಕಾಯಗುತ್ತಿದ್ದಂತೆ, ಹೊಲಗಳಲ್ಲಿ ಕದಿಯುವವರ ಸಂಖ್ಯೆಯೂ ಹೆಚ್ಚಾಗಿದೆ. ಬೇಲೂರಿನ ಜಮೀನಿನಲ್ಲಿ 2.7 ಲಕ್ಷ ಮೌಲ್ಯದ ಟೊಮ್ಯಾಟೊ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಅಂಗಡಿಯೊಂದರಿಂದ 20 ಕೆಜಿ ಟೊಮ್ಯಾಟೊ ಕಳ್ಳತನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!