ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಾಜಕೀಯದಿಂದ ನಿವೃತ್ತಿಯಾಗಲಿ: ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಆಗ್ರಹ

ಹೊಸದಿಗಂತ ವರದಿ,ಮೈಸೂರು:

50 ಸಾವಿರ ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿರುವ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಕೇವಲ 50 ಲಕ್ಷರೂಗೆ ಖರೀದಿಸಿ, ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅಲ್ಲದೇ ರಾಜಕೀಯದಿಂದಲೇ ನಿವೃತ್ತಿಹೊಂದಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಆಗ್ರಹಿಸಿದರು.
ಸೋಮವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ದೇಶದಲ್ಲಿ 70 ವರ್ಷಗಳ ಆಡಳಿತವನ್ನು ಕಾಂಗ್ರೆಸ್ ನಡೆಸಿದೆ. ಸ್ವಾತಂತ್ರಾ÷್ಯನAತರ ಕಾಂಗ್ರೆಸ್ ಪಕ್ಷವು ದೇಶದ ಆಡಳಿತವನ್ನು ಕೈಗೆತ್ತಿಕೊಂಡಾಗ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರರಹಿತ ಆಡಳಿತದ ಅಪೇಕ್ಷೆ ದೇಶದ ಪ್ರತಿಯೊಬ್ಬ ಜನರಲ್ಲಿತ್ತು. ಆದರೆ, ಕಾಂಗ್ರೆಸ್ ಆಡಳಿತ ಆರಂಭಿಸಿದ ಎರಡೇ ವರ್ಷಗಳಲ್ಲಿ ಒಂದು ದೊಡ್ಡ ಹಗರಣದಲ್ಲಿ ಸಿಲುಕಿಕೊಂಡಿತು. ಅದು ಜೀಪ್ ಹಗರಣ.
ಜೀಪ್ ಹಗರಣದಿಂದ ಆರಂಭಿಸಿ ಕಾಂಗ್ರೆಸ್ ಪಕ್ಷದ 70 ವರ್ಷಗಳ ಆಡಳಿತದಲ್ಲಿ ಇತ್ತೀಚಿನ ವರೆಗೆ 2ಜಿ, ಬೊಫೋರ್ಸ್, ಆಗಸ್ಟ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್, ಸ್ಕಾರ್ಪಿನ್ ಸಬ್ ಮೆರಿನ್, ಮಹಾರಾಷ್ಟç ನೀರಾವರಿ ಹಗರಣ, ಕಲ್ಲಿದ್ದಲು ಹಗರಣ ಇತ್ಯಾದಿಗಳು
ಸೇರಿದಂತೆ ಭೂಮಿ ಒಳಗೆ, ಭೂಮಿ ಮೇಲೆ, ಆಕಾಶ, ನದಿ, ಸಮುದ್ರ ಎಲ್ಲೂ ಬಿಡದೆ ಪ್ರತಿಯೊಂದು ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದೆ. ಮಾಡುವುದು ಕಾಂಗ್ರೆಸ್ಸಿಗರ ರಾಜಕೀಯ ಉದ್ದೇಶವಾಗಿದೆ. ಕಾಂಗ್ರೆಸ್ ಎಂದರೆ ಒಂದು ರೀತಿಯ ಭ್ರಷ್ಟಾಚಾರಕ್ಕೆ ಪರ್ಯಾಯ ಹೆಸರು ಎಂಬAತಾಗಿದೆ. ಸಾರ್ವಜನಿಕ ಜೀವನದಲ್ಲಿ ಗಾಂಧೀಜಿ ಹೋರಾಟ, ಸ್ವಾತಂತ್ರ÷್ಯ ಹೋರಾಟದ ಸಂದರ್ಭದಲ್ಲಿ ಇದ್ದ ಮೌಲ್ಯಗಳನ್ನು ಗಾಳಿಗೆ ತೂರಿ ಸ್ವಾರ್ಥ, ವಂಶಪರAಪರೆ ಮತ್ತು ಸ್ವಜನ ಪಕ್ಷಪಾತ ಎಂಬAಥ ಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.
ಕಳೆದ 70 ವ಼ರ್ಷಗಳಲ್ಲಿ 128 ಕಾಂಗ್ರೆಸ್ಸಿಗರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. 4 ಲಕ್ಷದ 82 ಸಾವಿರ ಕೋಟಿ ಮೊತ್ತದ ಭ್ರಷ್ಟಾಚಾರದ ಹಗರಣಗಳು ಈ ಅವಧಿಯಲ್ಲಿ ನಡೆದಿವೆ. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರವನ್ನೇ ರಾಜಕೀಯ ಸಿದ್ಧಾಂತವಾಗಿ ಮಾಡಿಕೊಂಡಿದೆ. ತನ್ನ ರಾಜಕೀಯ ಸಿದ್ಧಾಂತದ ಅನುಕರಣೆಗಾಗಿ ಇ.ಡಿ. ವಿರುದ್ಧ ಕಾಂಗ್ರೆಸ್ಸಿಗರು ಹೋರಾಟಕ್ಕೆ ಇಳಿದಿದ್ದಾರೆ. ಇ.ಡಿ. ಸುಮ್ಮಸುಮ್ಮನೆ ಭ್ರಷ್ಟಾಚಾರದ ಕುರಿತು ಪ್ರಶ್ನೆಗಳನ್ನು ಎತ್ತಿಲ್ಲ. ಆದರೆ ಇಡಿ ಸಂಸ್ಥೆಯ ಮೇಲೆ ಒತ್ತಡ ಹೇರಲು ಅದರ ವಿರುದ್ಧ ಹೋರಾಟ ನಡೆಸುತ್ತಿರುವುದು ಸರಿಯಲ್ಲ, ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಕಾಂಗ್ರೆಸ್ ಗೌರವ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿಗರ ಭ್ರಷ್ಟಾಚಾರ ಹಗರಣಗಳು ಮತ್ತು ರಾಜಕೀಯಕ್ಕಾಗಿ ಅಪರಾಧೀಕರಣ (ಕ್ರಿಮಿನಲೈಸೇಷನ್) ಇವೆರಡೂ ಕಾಂಗ್ರೆಸ್ಸಿನ ಸಿದ್ಧಾಂತವಾಗಿ ಬಿಟ್ಟಿದೆ. ಕಾಂಗ್ರೆಸ್‌ನ ಅನೇಕ ಸಚಿವರು ಈ ಭ್ರಷ್ಟಾಚಾರದ ಆಪಾದನೆಯಡಿ ರಾಜೀನಾಮೆ ಕೊಡಬೇಕಾಯಿತು. ಬರೋ ಬರೀ 128ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು 4.28 ಲಕ್ಷ ಕೋಟಿ ರೂ ಭ್ರಷ್ಟಾಚಾರ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ವರದಿಗಳೇ ಹೇಳುತ್ತಿವೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು. ಕಾಂಗ್ರೆಸ್ ಪಕ್ಷದ ಡಿ.ಎನ್.ಎ. ಎಂದರೆ ಅದು ಭ್ರಷ್ಟಾಚಾರ ಎಂದು ಟೀಕಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ಸುಮಾರು 5 ಸಾವಿರ ಸ್ವಾತಂತ್ರ÷್ಯ ಹೋರಾಟಗಾರರಿಗೆ ಮೋಸ ಮಾಡಿದ್ದಾರೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯನ್ನು ಯಂಗ್ ಇಂಡಿಯನ್ ಸಂಸ್ಥೆಗೆ ವರ್ಗಾವಣೆ ಮಾಡಿದ ಪ್ರಕರಣವಿದು.
ಯಂಗ್ ಇಂಡಿಯನ್ ಸಂಸ್ಥೆಯು ಸುಮಾರು 5 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಮೋಸದಿಂದ ವಶಕ್ಕೆ ಪಡೆದಿದೆ ಎಂಬ ಆರೋಪ ಇದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಕ್ರಿಮಿನಲ್ ಪ್ರಕರಣದಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದ ಪ್ರಕರಣವಿದು.
ಎಲ್ಲ ಆರೋಪಿಗಳ ವಿರುದ್ಧ ಪ್ರಾಥಮಿಕ ಹಂತದ ಸಾಕ್ಷ÷್ಯ ಸಿಕ್ಕಿದೆ ಎಂಬುದನ್ನು ಗಮನಿಸಿತು. ಬಳಿಕ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ.
ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ಹಿರಿಯ ವಕೀಲ ಶಾಂತಿಭೂಷಣ್ ಸೇರಿದಂತೆ ಸ್ವಾತಂತ್ರ÷್ಯ ಹೋರಾಟಗಾರರ ಹತ್ತಾರು ಕುಟುಂಬದವರ ಆರೋಪವೂ ಸೋನಿಯಾ- ರಾಹುಲ್ ವಿರುದ್ಧ ಇದೆ ಎಂಬುದನ್ನೂ ಗಮನಿಸಲೇಬೇಕು.
ಪಂಚ ರಾಜ್ಯಗಳ ಚುನಾವಣೆಯಲ್ಲಿನ ಹೀನಾಯ ಸೋಲು ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ. ಕಾಂಗ್ರೆಸ್ ಪಕ್ಷವು ದಿನೇದಿನೇ ದುರ್ಬಲವಾಗುತ್ತಿದೆ. ಕುಟುಂಬ ನಿಷ್ಠೆಯನ್ನು ಪ್ರಕಟಿಸುವ ಪ್ರಮುಖ ಉದ್ದೇಶದಿಂದ ಹತಾಶ ಕಾಂಗ್ರೆಸ್ಸಿಗರು ಇಡಿ ಕಚೇರಿಗಳ ಎದುರು ಇಂದು ಧರಣಿ ನಡೆಸುತ್ತಿದ್ದಾರೆ.
ಸಣ್ಣ ಕಳ್ಳರಿಗೆ ಶಿಕ್ಷೆ ಕೊಡಬೇಕು. ಸಾವಿರಾರು ಕೋಟಿ ವಂಚಿಸಿದವರನ್ನು ಹಾಗೆಯೇ ಬಿಡಬೇಕು ಎಂಬ ಅಪೇಕ್ಷೆ ಕಾಂಗ್ರೆಸ್ಸಿಗರದೇ? ಅದಕ್ಕಾಗಿ ಒತ್ತಡ ಹೇರಲು ಧರಣಿ ನಡೆಯುತ್ತಿದೆಯೇ?
ಕಾಂಗ್ರೆಸ್ಸಿಗರ ಈ ಪ್ರತಿಭಟನೆ ಕೈಲಾಗದವ ಮೈ ಪರಚಿಕೊಂಡ ಎಂಬAತಿದೆ ಎಂದು ಲೇವಡಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೈಸೂರು ನಗರ ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್. ಸಹ ಸಂಚಾಲಕರಾದ ಎನ್. ಪ್ರದೀಪ್ ಕುಮಾರ್. ಜಿಲ್ಲಾ ಮಾಧ್ಯಮ ರಾಜಕುಮಾರ್ ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!