ಅಂದು ಫೋನ್ ಕರೆಯಲ್ಲೇ ಕಾಯುವಂತೆ ಮಾಡಿದ್ದರು ಸೋನಿಯಾ ಗಾಂಧಿ: ಕಾಂಗ್ರೆಸ್​ನ ಮಾಜಿ ನಾಯಕಿಯ ಪುಸ್ತಕದಲ್ಲಿ ಸ್ಪೋಟಕ ವಿಚಾರ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಪಿಎ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕುರಿತು ಕಾಂಗ್ರೆಸ್​ನ ಮಾಜಿ ನಾಯಕಿಯೊಬ್ಬರು ತಮ್ಮ ಪುಸ್ತಕದಲ್ಲಿ ಬರೆದಿರುವ ವಿಚಾರ ಮತ್ತೊಮ್ಮೆ ರಾಜಕೀಯ ಬಿಸಿ ಏರಿಸಿದ್ದು, ಇದರಲ್ಲಿ ಸೋನಿಯಾ ಗಾಂಧಿ ಅವರ ಬಗ್ಗೆ ಒಂದು ದೊಡ್ಡ ವಿಷಯ ಬಹಿರಂಗವಾಗಿದೆ.

ಮಾಜಿ ಅಲ್ಪಸಂಖ್ಯಾತ ಸಚಿವೆ ಮತ್ತು ಬಿಜೆಪಿ ನಾಯಕಿ ನಜ್ಮಾ ಹೆಪ್ತುಲ್ಲಾ ಅವರ ಆತ್ಮಚರಿತ್ರೆ “ಇನ್ ಪರ್ಸ್ಯೂಟ್ ಆಫ್ ಡೆಮಾಕ್ರಸಿ: ಬಿಯಾಂಡ್ ಪಾರ್ಟಿ ಲೈನ್ಸ್”ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅದರಲ್ಲಿ ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರು 1 ಗಂಟೆ ಫೋನ್‌ನಲ್ಲಿ ಕಾಯುವಂತೆ ಮಾಡಿದರು ಎಂದು ಹೆಪ್ತುಲ್ಲಾ ಹೇಳಿದ್ದಾರೆ.

1999 ರಲ್ಲಿ ಇಂಟರ್-ಪಾರ್ಲಿಮೆಂಟರಿ ಯೂನಿಯನ್ (ಐಪಿಯು) ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ನಜ್ಮಾ ಹೆಪ್ತುಲ್ಲಾ ಬರ್ಲಿನ್‌ನಿಂದ ಆಗಿನ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಕರೆ ಮಾಡಿದ್ದರು. ಆದರೆ ಅವರು ಒಂದು ಗಂಟೆ ಫೋನ್‌ಲೈನ್‌ನಲ್ಲಿ ಕಾಯಬೇಕಾಯಿತು. “ಮೇಡಂ ಬ್ಯುಸಿಯಾಗಿದ್ದಾರೆ” ಎಂದು ಅವರಿಗೆ ಹೇಳಲಾಯಿತು.

ಆದ್ರೆ ಬರ್ಲಿನ್‌ನಿಂದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕರೆ ಮಾಡಿದ್ದೆ . ಅವರು ತಕ್ಷಣವೇ ಅವರ ಕರೆಯನ್ನು ತೆಗೆದುಕೊಂಡರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ, ‘ಅವರು ಈ ಸುದ್ದಿಯನ್ನು ಕೇಳಿದಾಗ, ತುಂಬಾ ಸಂತೋಷಪಟ್ಟರು, ಮೊದಲನೆಯದಾಗಿ ಭಾರತವು ಈ ಗೌರವವನ್ನು ಸ್ವೀಕರಿಸಿದ ಕಾರಣ ಮತ್ತು ಎರಡನೆಯದಾಗಿ, ಇದನ್ನು ಭಾರತೀಯ ಮುಸ್ಲಿಂ ಮಹಿಳೆಗೆ ನೀಡಲಾಯಿತು’ ಎಂದು ಅವರು ಹೇಳಿದರು, ‘ನೀವು ಹಿಂತಿರುಗಿ, ನಾವು ಆಚರಿಸುತ್ತೇವೆ.’ ಎಂದು ಹೇಳಿದ್ದರು ಎಂದು ಬರೆಯಲಾಗಿದೆ.

ಕರೆಗೆ ಬರಲೇ ಇಲ್ಲ ಸೋನಿಯಾ ಗಾಂಧಿ
ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮತ್ತು ನನ್ನ ನಾಯಕಿ ಸೋನಿಯಾ ಗಾಂಧಿಗೆ ಕರೆ ಮಾಡಿದಾಗ, ಅವರ ಉದ್ಯೋಗಿಯೊಬ್ಬರು ಮೊದಲು ಹೇಳಿದರು, ‘ಮೇಡಂ ಬ್ಯುಸಿಯಾಗಿದ್ದಾರೆ’ ಅಂತ. ನಾನು ಬರ್ಲಿನ್‌ನಿಂದ ಅಂತಾರಾಷ್ಟ್ರೀಯ ಕರೆ ಮಾಡಿದ್ದರಿಂಂದ ಲೈನ್​ನಲ್ಲೇ ಇರುವಂತೆ ಹೇಳಿದರು. ನಾನು ಒಂದು ಗಂಟೆ ಕಾಲ ಕಾಯುತ್ತಿದ್ದೆ. ಕೊನೆಗೂ ಸೋನಿಯಾ ನನ್ನೊಂದಿಗೆ ಮಾತನಾಡಲು ಲೈನ್‌ಗೆ ಬರಲೇ ಇಲ್ಲ ಎಂದು ನಜ್ಮಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ

‘ನಾನು ನಿಜವಾಗಿಯೂ ನಿರಾಶೆಗೊಂಡೆ, ಆ ಕರೆ ನಂತರ, ನಾನು ಸೋನಿಯಾಗೆ ಏನನ್ನೂ ಹೇಳಲಿಲ್ಲ. ಐಪಿಯು ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ಮುಂದಿಡುವ ಮೊದಲು, ನಾನು ಅವರ ಅನುಮತಿಯನ್ನು ಪಡೆದಿದ್ದೇನೆ ಮತ್ತು ಆ ಸಮಯದಲ್ಲಿ, ಅವರು ತಮ್ಮ ಆಶೀರ್ವಾದವನ್ನು ನೀಡಿದ್ದರು. ಆದರೆ ಕರೆಗೆ ಬರದಿದ್ದ ಅಂತಹ ಒಂದು ಕ್ಷಣ ನನ್ನ ಮನಸ್ಸಿನಲ್ಲಿ ನಿರಾಕರಣೆಯ ಭಾವನೆಯನ್ನು ಶಾಶ್ವತವಾಗಿ ಬಿಟ್ಟಿದೆ’ ಎಂದು ನಜ್ಮಾ ಬರೆದಿದ್ದಾರೆ.

ಸೋನಿಯಾ ಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ನಜ್ಮಾ ಕಾಂಗ್ರೆಸ್ ತೊರೆದು 2004 ರಲ್ಲಿ ಬಿಜೆಪಿ ಸೇರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!