ಹೊಸದಿಗಂತ ವರದಿ,ಮಸ್ಕಿ (ರಾಯಚೂರು) :
ಮಗು ದತ್ತು ಪ್ರಕರಣದಲ್ಲಿ ಸಿಲುಕಿಕೊಂಡಿರುವ ರೀಲ್ಸ್ ಸ್ಟಾರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ಅವರನ್ನು ಮಸ್ಕಿ ತಾಲೂಕಿನ ಕಾಚಾಪುರ ಗ್ರಾಮಕ್ಕೆ ಕರೆದೊಯ್ದು ಪೊಲೀಸರು ಸ್ಥಳ ಮಹಜರ ಮಾಡಿದ್ದಾರೆ. ಮಗು ದತ್ತು ವಿಚಾರ ತಿಳಿದು ಗ್ರಾಮಸ್ಥರು ಕೆಂಡಾಮoಡಲವಾದ ಘಟನೆ ಜರುಗಿದೆ.
ಸೋನು ಗೌಡ ಅವರು ಹೆಣ್ಣು ಮಗುವನ್ನು ದತ್ತು ಪಡೆದ ವಿಚಾರವಾಗಿ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿರುವ ಭಾಗವಾಗಿ ಭಾನುವಾರ ಸ್ಥಳ ಮಹಜರಿಗೆ ಕಾಚಾಪುರ ಗ್ರಾಮಕ್ಕೆ ಕರೆತರಲಾಗಿತ್ತು.
ದತ್ತು ಪಡೆದಿದ್ದಾರೆ ಎನ್ನಲಾದ ಬಾಲಕಿಯ ಚಿಕ್ಕಪ್ಪ ಅಮರೇಗೌಡ ಮನೆಯಿಂದ ಮಗು ಕರೆದೊಯ್ದಿದ್ದರು ಎನ್ನುವ ಹಿನ್ನೆಲೆ ಆ ಮನೆಯಲ್ಲಿ ಸ್ಥಳ ಮಹಜರು ಮಾಡಲಾಯಿತು. ಇನ್ನು ಆರೋಪಿತೆ ಸೋನುಗೌಡ ಇತ್ತೀಚೆಗೆ ಇದೇ ಮನೆಯಲ್ಲಿ ರೀಲ್ಸ್ ಮಾಡಿದ್ದರು. ದತ್ತು ಪ್ರಕರಣ ವಿಚಾರ ತಿಳಿಯುತ್ತಲೇ ಕೊಪಗೊಂಡ ಗ್ರಾಮಸ್ಥರು ಸೋನುಗೌಡರ ವಿರುದ್ಧ ಕೋಪಗೊಂಡಿದ್ದನ್ನು ಗಮನಿಸಿದ ಬ್ಯಾಡರಹಳ್ಳಿ ಪೊಲೀಸರು ಅಲ್ಲಿಂದ ಅವರನ್ನು ಕರೆದುಕೊಂಡು ಹೋಗಿದ್ದಾರೆ.
ಅಪ್ರಾಪ್ತ ಬಾಲಕಿಯ ಹೆತ್ತವರಿಗೆ ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರು ಭಾನುವಾರ ಬೆಳಗ್ಗೆ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿದ ಪರಿಣಾಮ ಅವರು ಶನಿವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದರು. ಗ್ರಾಮದ ಕೆಲವರು ಹೇಳುವಂತೆ ಆರೋಪಿತೆ ಸೋನು ಗೌಡ ರಾತ್ರೋ ರಾತ್ರಿ ಬಾಕಿಯನ್ನು ಕರೆದುಕೊಂಡು ಹೋಗಿದ್ದಳು ಎನ್ನಲಾಗುತ್ತಿದೆ. ಪೊಲೀಸ್ ತನಿಖೆಯಿಂದ ಎಲ್ಲ ಸತ್ಯಾ ಸತ್ಯೆತೆಗಳು ಬೆಳಕಿಗೆ ಬರಬೇಕಿದೆ.