ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಯ ಬಳಿಕ ಮತ್ತೆ ಚಿತ್ರರಂಗ ಸಕ್ರಿಯಗೊಂಡಿದೆ. ಹೃದಯ ಶ್ರೀಮಂತ ನಟ ಸೋನು ಸೂದ್ ಅಭಿನಯದ ʼಶ್ರೀಮಂತʼ ಸಿನಿಮಾ ಇಂದು ತೆರೆ ಕಂಡಿದೆ.
ಏಪ್ರಿಲ್ 14 ರಂದು “ಶ್ರೀಮಂತ’ ಸಿನಿಮಾ ಬಿಡುಗಡೆಯಾಗಿ ತೆರೆ ಕಾಣಬೇಕಿತ್ತು. ಆದರೆ ಆ ವೇಳೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಚಿತ್ರತಂಡ ತಮ್ಮ ಸಿನಿಮಾದ ಬಿಡುಗಡೆಯನ್ನು ಕೆಲ ಕಾಲ ಮುಂದೂಡಿಕೊಂಡಿತ್ತು. ಇದೀಗ ಚುನಾವಣೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚಿತ್ರತಂಡ ಇಂದು “ಶ್ರೀಮಂತ’ ಸಿನಿಮಾವನ್ನು ತೆರೆಗೆ ತಂದಿದೆ.
“ಗೋಲ್ಡನ್ ರೈನ್ ಮೂವೀಸ್’ ಮತ್ತು “ಅಣ್ಣ ಟಾಕೀಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ “ಶ್ರೀಮಂತ’ ಸಿನಿಮಾದಲ್ಲಿ ಸೋನು ಸೂದ್ ಅವರೊಂದಿಗೆ ಯುವನಟ ಕ್ರಾಂತಿ, ವೈಷ್ಣವಿ ಪಟುವರ್ಧನ್, ವೈಷ್ಣವಿ ಚಂದ್ರನ್ ಮೆನನ್, ಗಿರೀಶ್ ಶಿವಣ್ಣ, ಕುರಿರಂಗ, ಮಂಜುನಾಥ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ ಎಂಟು ಹಾಡುಗಳಿದ್ದು, ಹಂಸಲೇಖ ಸಂಗೀತ ಸಂಯೋಜನೆಯಿದೆ. “ಶ್ರೀಮಂತ’ ಸಿನಿಮಾಕ್ಕೆ ಹಾಸನ್ ರಮೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
“ಶ್ರೀಮಂತ’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಹೀಗೆ ಬೇರೆ ಬೇರೆ ಪಕ್ಷಗಳ ಅನೇಕ ರಾಜಕಾರಣಿಗಳು ಕಾಣಿಸಿಕೊಂಡಿದ್ದಾರೆ.