ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂರಜ್ ರೇವಣ್ಣ ಘಟನೆ ವಿಚಿತ್ರ, ವಿಕೃತ ಮತ್ತು ಹೇಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ಸೂರಜ್ ರೇವಣ್ಣ ಬಂಧನದ ಕುರಿತು ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಅದರ ಬಗ್ಗೆ ಏನು ಹೇಳಬೇಕೆಂದು ನನಗೆ ತಿಳಿದಿಲ್ಲ. ಇವೆಲ್ಲ ವಿಚಿತ್ರ, ವಿಕೃತ ಮತ್ತು ಅಸಹ್ಯಕರ ಘಟನೆಗಳು. ಇದು ಪ್ರಜ್ವಲ್, ಸೂರಜ್ ಅಥವಾ ಯಡಿಯೂರಪ್ಪ ಅವರ ವಿಷಯವಾಗಿರಬಹುದು. ಯಾರು ಮಾಡಿದರೂ, ಅವರಿಗೆ ಏನೂ ಅನ್ನಿಸುತ್ತಿಲ್ಲವಲ್ಲ. ಎಂದು ವಾಗ್ದಾಳಿ ನಡೆಸಿದ್ದಾರೆ.