ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ ಒರ್ವ ಕಾರ್ಯಕ್ರಮಕ್ಕೆ ಚಂದನವನದ ಎಲ್ಲಾ ತಾರೆಯರು ಆಗಮಿಸಿ, ಮೆರುಗು ಹೆಚ್ಚಿಸಿದ್ದಾರೆ. ಆದರೆ ರಿಷಭ್ ಶೆಟ್ಟಿ ಕಾಣಿಸಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು. ಅದಕ್ಕೆ ರಿಷಭ್ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿದ್ದಾರೆ.
ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬರ್ಹೇನ್‌ನಲ್ಲಿರುವ ಕಾರಣ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಆಗಿಲ್ಲ. ಲೈವ್‌ನಲ್ಲಿ ಕಾರ್ಯಕ್ರಮ ನೋಡಿದ್ದೇನೆ. ಕಣ್ತುಂಬಿ ಬಂದಿತು. ನಾನು ಕಾರ್ಯಕ್ರಮದಲ್ಲಿ ಇರಬೇಕಿತ್ತು ಎಂದು ತುಂಬಾ ಅನಿಸಿತ್ತು. ಅಪ್ಪು ಸರ್ ನನ್ನನ್ನು ಕ್ಷಮಿಸಿ ಗಂಧದ ಗುಡಿಯಲ್ಲಿ ಭೇಟಿಯಾಗೋಣ ಎಂದಿದ್ದಾರೆ.