ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಲ್ಲಿ ಭಾನುವಾರ ಇಂಡಿಯಾ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆದಿದ್ದು, ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಪಾಕ್ ಟೀಮ್‌ಗೆ ಸಪೋರ್ಟ್ ಮಾಡಿ ಟಿವಿ ಮುಂದೆ ಗಂಟೆಗಟ್ಟಲೆ ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಇದನ್ನೇ ಬ್ಲಿಂಕಿಟ್ ಆಧಾರವಾಗಿಟ್ಟುಕೊಂಡು ಜಾಹೀರಾತೊಂದನ್ನು ತಯಾರು ಮಾಡಿದೆ.
ನಮ್ಮ ಟೀಂ ಇಂಡಿಯಾ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಫ್ರಸ್ಟ್ರೇಷನ್‌ನಲ್ಲಿರುವ ಪಾಕ್ ಅಭಿಮಾನಿಗಳು ಟಿವಿ ಒಡೆದು ಹಾಕಿರುತ್ತಾರೆ. ಬಟ್ 10 ನಿಮಿಷದಲ್ಲಿ ನಿಮಗೆ ಟಿವಿ ಡೆಲಿವರಿ ಮಾಡೋದಕ್ಕೆ ನಮಗೆ ಆಗೋದಿಲ್ಲ ಎಂದು ತಮಾಷೆಯಾದ ಜಾಹೀರಾತನ್ನು ತಯಾರು ಮಾಡಿದ್ದಾರೆ.
ಬ್ಲಿಂಕಿಟ್ ಎಲ್ಲ ಪದಾರ್ಥಗಳನ್ನು 10 ನಿಮಿಷದಲ್ಲಿ ಡೆಲಿವರಿ ಮಾಡುತ್ತೇವೆ ಎನ್ನುವ ಜಾಹೀರಾತನ್ನು ಸದಾ ನೀಡುತ್ತದೆ. ಅದನ್ನೇ ಇಟ್ಟುಕೊಂಡು ಈ ಬಾರಿ ಮಾತ್ರ ಹತ್ತು ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋದಕ್ಕೆ ಆಗೋದಿಲ್ಲ ಎಂದು ಪಾಕ್ ಫ್ಯಾನ್ಸ್ ಕಾಲೆಳೆದಿದ್ದಾರೆ. ಸದ್ಯ ಈ ಜಾಹೀರಾತು ಎಲ್ಲೆಡೆ ವೈರಲ್ ಆಗಿದೆ.