ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾತ್ಮ ಗಾಂಧಿ ಅವರ 77 ನೇ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರು ಕೇವಲ ವ್ಯಕ್ತಿಯಲ್ಲ ಬದಲಿಗೆ ಅವರು ಭಾರತದ ಆತ್ಮ ಮತ್ತು ಪ್ರತಿಯೊಬ್ಬ ಭಾರತೀಯನಲ್ಲೂ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.
“ಗಾಂಧೀಜಿ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಭಾರತದ ಆತ್ಮ ಮತ್ತು ಇಂದಿಗೂ ಪ್ರತಿಯೊಬ್ಬ ಭಾರತೀಯನಲ್ಲೂ ಜೀವಂತವಾಗಿದ್ದಾರೆ. ಸತ್ಯ, ಅಹಿಂಸೆ ಮತ್ತು ನಿರ್ಭಯತೆಯ ಶಕ್ತಿಯು ದೊಡ್ಡ ಸಾಮ್ರಾಜ್ಯದ ಬೇರು” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇಡೀ ಜಗತ್ತು ಅವರ ಈ ಆದರ್ಶಗಳಿಂದ ಸ್ಫೂರ್ತಿ ಪಡೆಯುತ್ತದೆ, ಅವರ ಹುತಾತ್ಮ ದಿನದಂದು ರಾಷ್ಟ್ರಪಿತ ಮಹಾತ್ಮ, ನಮ್ಮ ಬಾಪು ಅವರಿಗೆ ನೂರಾರು ನಮಸ್ಕಾರಗಳು ಎಂದು ಪೋಸ್ಟ್ ಮಾಡಿದ್ದಾರೆ.