July 23, 2026
Thursday, July 23, 2026
spot_img

ತೆರೆ ಮೇಲೆ ಬರಲಿದೆ ಸೌರವ್‌ ಗಂಗೂಲಿ ಬಯೋಪಿಕ್‌: ದಾದಾ ಸಿನಿಮಾ ಫಸ್ಟ್‌ ಲುಕ್‌ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸೌರವ್‌ ಗಂಗೂಲಿ ಲೈಫ್‌ಸ್ಟೋರಿ ಈಗ ಸಿನಿಮಾ ಆಗಿ ತಯಾರಾಗಿದೆ. ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್‌ ರಾವ್‌ ನಟಿಸುತ್ತಿದ್ದು, ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ಗಂಗೂಲಿ ಜನ್ಮದಿನದ ಅಂಗವಾಗಿ ಸಿನಿ ತಂಡ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಕ್ರಿಕೆಟ್‌ಪ್ರೇಮಿಗಳು ಫಸ್ಟ್‌ಲುಕ್‌ ನೋಡಿ ಥ್ರಿಲ್‌ ಆಗಿದ್ದಾರೆ. ಇದರ ಜೊತೆಗೆ ಈ ಸಿನಿಮಾವು 2027ರ ಮೇ 14ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

ಕ್ರಿಕೆಟ್‌ ಪ್ರೇಮಿಗಳು ಹಲವು ದಿನಗಳಿಂದ ಗಂಗೂಲಿ ಲೈಫ್‌ಸ್ಟೋರಿಗಾಗಿ ಕಾಯ್ತಾ ಇದ್ದರು. ಇದೀಗ ಅವರ ಕನಸು ನನಸಾಗಿದೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್ ಪಂದ್ಯದ ಐತಿಹಾಸಿಕ ಗೆಲುವಿನ ನಂತರ, ಲಾರ್ಡ್ಸ್ ಕ್ರೀಡಾಂಗಣದ ಗ್ಯಾಲರಿಯಲ್ಲಿ ನಿಂತು ಗಂಗೂಲಿ ಅವರು ತಮ್ಮ ಟೀ-ಶರ್ಟ್ ಬಿಚ್ಚಿ ಗಾಳಿಯಲ್ಲಿ ಬೀಸಿ ಸಂಭ್ರಮಿಸಿದ್ದ ಅವಿಸ್ಮರಣೀಯ ಕ್ಷಣವನ್ನು ಈ ಪೋಸ್ಟರ್‌ನಲ್ಲಿ ಮರುಸೃಷ್ಟಿಸಲಾಗಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾದದ್ದಕ್ಕೆ ಸಾಕ್ಷಿಯಾಗಿದ್ದ ಈ ರಗಡ್ ಲುಕ್‌ನೊಂದಿಗೆ ದಾದಾಗೆ ಚಿತ್ರತಂಡ ಜನ್ಮದಿನದ ಶುಭಾಶಯ ಕೋರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !