ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾದ ವಿಪಕ್ಷ ನಾಯಕ ಲೀ ಜೇ ಮ್ಯುಂಗ್ (Lee-jae-myung) ಅವರ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ.
ಹೊಸ ವಿಮಾನ ನಿಲ್ದಾಣವೊಂದಕ್ಕೆ ಲೀ ಭೇಟಿ ನೀಡಿ ನಂತರ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅವರ ಕುತ್ತಿಗೆಗೆ ಇರಿದಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಪಕ್ಕದಲ್ಲೇ ಇದ್ದವರು ಕುಸಿದ ಬಿದ್ದ ಲೀ ಅವರ ಕುತ್ತಿಗೆಗೆ ಕರ್ಚೀಫನ್ನು ಗಟ್ಟಿಯಾಗಿ ಒತ್ತಿ ರಕ್ತ ದೋರದಂತೆ ಹಿಡಿದುಕೊಂಡಿದ್ದಾರೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿ ಮಾಡಿದವನನ್ನು ಬಂಧಿಸಲಾಗಿದೆ.