ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪಂದನಾ ವಿಜಯ ರಾಘವೇಂದ್ರ ಅವರ 11ನೇ ದಿನದ ಕಾರ್ಯವನ್ನು ಇಂದು ನೆರವೇರಿಸಲಾಗುತ್ತಿದೆ.
ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತವರು ಮನೆಯಲ್ಲಿ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ. ಸುಮಾರು ನಾಲ್ಕು ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಬಾಣಸಿಗರು ಈಗಾಗಲೇ ಆಹಾರ ತಯಾರಿಸಿದ್ದಾರೆ. ಗಣ್ಯರಿಗೆ ಆಹ್ವಾನ ನೀಡಿದ್ದು, ವಿಜಯ್ ದುಃಖದಲ್ಲಿ ಭಾಗಿಯಾಗಲಿದ್ದಾರೆ.
11 ದಿನಗಳ ಹಿಂದೆ ಸ್ಪಂದನಾ ತಮ್ಮ ಕಸಿನ್ಸ್ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತವಾಗಿ ಸ್ಪಂದನಾ ಕೊನೆಯುಸಿರೆಳೆದಿದ್ದರು.