ನಾಳೆ ಬೆಂಗಳೂರಿಗೆ ಸ್ಪಂದನಾ ಮೃತದೇಹ, ಬುಧವಾರ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್​ವುಡ್​ ನಟ ವಿಜಯ್​ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ ನಲ್ಲಿ ಮುಗಿದಿದ್ದು, ಮೃತ ದೇಹವನ್ನು (Dead Body) ನಾಳೆ ಸಾಯಂಕಾಲ ಬೆಂಗಳೂರಿಗೆ ತರಲಾಗುವುದು ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಸ್ಪಂದನಾ ಸಾವಿನ ಕುರಿತಂತೆ ಬ್ಯಾಂಕಾಕ್ ಪ್ರಕ್ರಿಯೆಗಳು ಮುಗಿಯಲು ನಾಳೆ ಮಧ್ಯಾಹ್ನ ಆಗುತ್ತದೆ. ಆದ್ದರಿಂದ ಪ್ರಕ್ರಿಯೆಗಳು ಮುಗಿಸಿ ಮೃತದೇಹ ಸಂಜೆ ಹೊರಡಲಾಗುತ್ತದೆ. ರಾತ್ರಿಯ ಒಳಗೆ ಮೃತ ದೇಹ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ (Bangalore) ಕೆಲವರು ಅಲ್ಲಿಗೆ ಹೋಗೋಣ ಎಂದುಕೊಂಡಿದ್ದೆವು. ಆದ್ರೆ ನಾವು ಹೋಗೋ ಅಷ್ಟರಲ್ಲಿ ಸಮಯ ಆಗುತ್ತೆ. ಆದ್ರಿಂದ ನಾವ್ಯಾರೂ ಇಲ್ಲಿಂದ ಹೋಗ್ತಾ ಇಲ್ಲ. ನಾಳೆ ರಾತ್ರಿ 11:30ರ ಹೊತ್ತಿಗೆ ಮೃತ ದೇಹ ಬರಬಹುದು. ಬುಧವಾರ ಅಂತ್ಯ ಸಂಸ್ಕಾರ ನೆರವೇರಲಿದೆ.

ವಿಜಯ್​ ರಾಘವೇಂದ್ರ ಅವರದ್ದು ದೊಡ್ಡ ಕುಟುಂಬ. ಡಾ. ರಾಜ್​ಕುಮಾರ್​ ಅವರ ಹತ್ತಿರದ ಸಂಬಂಧಿಗಳಾದ ಅವರ ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ಶಿವರಾಜ್​ಕುಮಾರ್​ ಅವರು ಹೈದರಾಬಾದ್​ನಲ್ಲಿ ‘ಭೈರತಿ ರಣಗಲ್​’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಸ್ಪಂದನಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಣ್ಣ ಬೆಂಗಳೂರಿಗೆ ವಾಪಸ್​ ಹೊರಟಿದ್ದಾರೆ. ವಿಜಯ್​ ರಾಘ​ವೇಂದ್ರ ಅವರ ನಿವಾಸಕ್ಕೆ ಎಲ್ಲರೂ ಆಗಮಿಸುತ್ತಿದ್ದಾರೆ.

ವಿಜಯ್​ ರಾಘವೇಂದ್ರ ಸಹೋದರ ಶ್ರೀಮುರಳಿ ಅವರು ಸ್ಪಂದನಾ ನಿಧನದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ಕರೆ ಮಾಡಿ ತಿಳಿಸಿದರು. ಫ್ಯಾಮಿಲಿ ಜೊತೆ ಅತ್ತಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಣ್ಣ ಕೂಡ ಈ ಟ್ರಿಪ್​ಗೆ ಅವರ ಜೊತೆ ಸೇರಿಕೊಳ್ಳುವವರಿದ್ದರು. ಅತ್ತಿಗೆ ನಿನ್ನೆ (ಆ.6) ರಾತ್ರಿ ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಲೋ ಬಿಪಿ ಆಗಿದ್ದರಿಂದ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದುಬಂದಿದೆ. ನಾಳೆ ಇನ್ನಷ್ಟು ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!