ನೀವು ಮೋದಿ ಮುಂದೆ ತಲೆಬಾಗಿದ್ದೀರಿ ಎಂದ ರಾಹುಲ್ ಗಾಂಧಿಗೆ ಖಡಕ್ ಆಗಿ ಉತ್ತರಿಸಿದ ಸ್ಪೀಕರ್ ಓಂ ಬಿರ್ಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಅಧಿವೇಶನದಲ್ಲಿ ಸ್ಪೀಕರ್ ನಿಷ್ಪಕ್ಷವಾಗಿ ಇರಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸ್ಪೀಕರ್ ಸರ್, ನೀವು ನಿಮ್ಮ ಸ್ಥಾನವನ್ನು ಅಲಂಕರಿಸಿದಾಗ, ನಾನು ನಿಮ್ಮೊಂದಿಗೆ ನಿಮ್ಮ ಕುರ್ಚಿ ಬಳಿ ಬಂದಿದ್ದೆ. ಲೋಕಸಭೆಯ ಅಂತಿಮ ತೀರ್ಪುಗಾರರು ನೀವೇ. ನೀವು ಏನು ಹೇಳುತ್ತೀರೋ ಅದು ಭಾರತೀಯ ಪ್ರಜಾಪ್ರಭುತ್ವವನ್ನು ಮೂಲಭೂತವಾಗಿ ವ್ಯಾಖ್ಯಾನಿಸುತ್ತದೆ ಎಂದು ಹೇಳಿದ್ದಾರೆ.

ಇಬ್ಬರು ಜನರು ಕುರ್ಚಿಯಲ್ಲಿ ಕುಳಿತಿದ್ದಾರೆ. ಒಬ್ಬರು ಲೋಕಸಭೆಯ ಸ್ಪೀಕರ್ ಮತ್ತೊಬ್ಬರು ಓಂ ಬಿರ್ಲಾ . ನಾನು ನಿಮ್ಮ ಕೈ ಕುಲುಕಿದಾಗ, ನೀವು ನೇರವಾಗಿ ನಿಂತು ನನ್ನ ಕೈ ಕುಲುಕಿದ್ದೀರಿ. ಮೋದಿಜಿ ನಿಮ್ಮ ಕೈ ಕುಲುಕಿದಾಗ, ನೀವು ತಲೆಬಾಗಿದ್ದೀರಿ ಎಂದು ರಾಹುಲ್ ಹೇಳಿದ್ದಾರೆ.

ಈ ವೇಳೆ ತಕ್ಷಣವೇ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿಯವರು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.

ನಂತರ ರಾಹುಲ್ ಅವರಿಗೆ ನೇರವಾಗಿ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಬಿರ್ಲಾ, ‘ಪ್ರಧಾನಿ ನರೇಂದ್ರ ಮೋದಿ ಅವರು ಸಭಾನಾಯಕರಾಗಿದ್ದಾರೆ. ‘ಮೇರಾ ಸಂಸ್ಕಾರ್ ಕೆಹತಾ ಹೈ ಕಿ ಜೋ ಹಮ್ಸೇ ಬಡೇ ಹೈ ಉನ್ಸೆ ಝುಕ್ ಕೇ ನಮಸ್ಕಾರ್ ಕರೋ ಮತ್ತು ಬರಾಬರ್ ವಾಲೋ ಸೇ ಸೀದೇ ಖಡೇ ಹೋಕೆ (ನನ್ನ ಸಂಸ್ಕೃತಿಯು ಹೇಳುವುದೇನೆಂದರೆ ಹಿರಿಯರ ಮುಂದೆ ತಲೆಬಾಗಬೇಕು, ಸಮಾನರೊಂದಿಗೆ ನೇರವಾಗಿ ನಿಂತು ಕೈಕುಲಕಬೇಕು)’ ಎಂದು ಹೇಳಿದ್ದಾರೆ.

ಸ್ಪೀಕರ್ ಅವರ ಮಾತುಗಳಿಗೆ ಗೌರವ ಸೂಚಿಸಿದ ರಾಹುಲ್,’ನಾನು ನಿಮ್ಮ ಮಾತನ್ನು ಗೌರವಿಸುತ್ತೇನೆ, ಆದರೆ ಈ ಸದನದಲ್ಲಿ ಸ್ಪೀಕರ್‌ಗಿಂತ ಯಾರೂ ದೊಡ್ಡವರಲ್ಲ’ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!