ಹೊಸದಿಗಂತ ಡಿಜಿಟಲ್ ಡೆಸ್ಕ್:
ಇವತ್ತಿನ ರೆಸಿಪಿಯಲ್ಲಿ ಈ ಸ್ಪೆಷಲ್ ಅಂಬೊಡೆ ನಿಮಗಾಗಿ… ಹಾಗಾದ್ರೆ ಯಾವ ಅಂಬೊಡೆ ಅಂತೀರಾ…? ಇದು ಅಲಸಂಡೆ ಬೀಜದ ಅಂಬೊಡೆ.
ಬೇಕಾಗುವ ಸಾಮಾಗ್ರಿ:
ಅಲಸಂಡೆ ಬೀಜ ಎರಡು ಲೋಟ, ಸ್ವಲ್ಪ ಬೆಳ್ತಿಗೆ ಅಕ್ಕಿ, ಹಸಿಮೆಣಸಿನ ಕಾಯಿ ನಾಲ್ಕು, ಕೊತ್ತಂಬರಿ ಎರಡು ಟೀ ಸ್ಪೂನ್, ಕರಿಬೇವು, ಜೀರಿಗೆ ಅರ್ಧ ಟೀ ಸ್ಪೂನ್, ರುಚಿಗೆ ಬೇಕಾದಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ:
ಅಲಸಂಡೆ ಬೀಜವನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ, ಬೆಳ್ತಿಗೆ ಅಕ್ಕಿಯನ್ನೂ ತೊಳೆದು ಅಲಸಂಡೆ ಬೀಜದೊಂದಿಗೆ ಮೂರು ಗಂಟೆಗಳ ಕಾಲ ನೆನೆಸಿಡಿ. ಚೆನ್ನಾಗಿ ನೆನೆದ ಬೀಜವನ್ನು ಮಿಕ್ಸಿಪಾತ್ರೆಗೆ ಹಾಕಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿ ನಾಲ್ಕು, ಕೊತ್ತಂಬರಿ ಎರಡು ಟೀ ಸ್ಪೂನ್, ಕರಿಬೇವು, ಜೀರಿಗೆ ಅರ್ಧ ಟೀ ಸ್ಪೂನ್, ರುಚಿಗೆ ಬೇಕಾದಷ್ಟು ಉಪ್ಪು, ಚಿಟಿಕೆ ಅರಶಿನ ಸೇರಿಸಿ ದಪ್ಪವಾಗಿ ರುಬ್ಬಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಅಂಬಡೆ ತಯಾರಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಸ್ಪೆಷಲ್ ಅಂಬೊಡೆ ಚಹಾದೊಂದಿಗೆ ತಿನ್ನಲು ಮಜವಾಗಿರುತ್ತದೆ