ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಂದು ಬಾರಿ ತಿಂಡಿ ಏನು ಮಾಡೋದು ಎಂಬುದೇ ದೊಡ್ಡ ಚಿಂತೆ. ಅದಕ್ಕಾಗಿಯೇ ದಿಢೀರ್ ಆಗಿ ದೋಸೆ ರೆಸಿಪಿ ಆಯ್ಕೆ ಮಾಡಬಹುದು. ಹಾಗಾದ್ರೆ ಫಟಾ ಫಟ್ ದೋಸೆ ಹೇಗೆ ಮಾಡೋದು ನೋಡೋಣ್ವೇ…
ಬೇಕಾಗುವ ಸಾಮಾಗ್ರಿ:
ಅಕ್ಕಿ ಹಿಟ್ಟು – 3 ಕಪ್, ಗೋಧಿ ಹಿಟ್ಟು ಒಂದೂವರೆ ಕಪ್, ಮೈದಾ ಹಿಟ್ಟು ಒಂದು ಕಪ್, ಮಧ್ಯಮ ಗಾತ್ರದ ಈರುಳ್ಳಿ 2, ಹಸಿಮೆಣಸಿನ ಕಾಯಿ 5, ಸಾಸಿವೆ ಒಂದು ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಎಣ್ಣೆ.
ಮಾಡುವ ವಿಧಾನ:
ಮೂರು ಬಗೆಯ ಹಿಟ್ಟನ್ನು ಒಂದು ಪಾತ್ರೆಗೆ ಸುರಿದು ಚೆನ್ನಾಗಿ ಮಿಶ್ರ ಮಾಡಿಟ್ಟುಕೊಳ್ಳಿ. ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿ. ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನೀರುಳ್ಳಿಯ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಹಸಿಮೆಣಸನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಇವುಗಳನ್ನು ದೋಸೆ ಹಿಟ್ಟಿಗೆ ಸೇರಿಸಿ. ಒಗ್ಗರಣೆ ಸೌಟು ಬಿಸಿಗಿಟ್ಟು, ಎಣ್ಣೆ ಹಾಕಿ ಸಾಸಿವೆ ಒಗ್ಗರಣೆಯನ್ನು ನೀಡಿ. ತವಾ ಬಿಸಿಗಿಟ್ಟು ದೋಸೆ ಹುಯ್ಯಿರಿ. ಬಿಸಿ ಬಿಸಿ ದೋಸೆ ಚಟ್ನಿಯ ಜೊತೆಗೆ ಸೇವಿಸಲು ಬಲು ರುಚಿ.