BUISNESS | ಲಿಬರ್ಟಿಯಿಂದ ಟೆಸ್ಲಾ ಕಾರುಗಳಿಗೆೆ ವಿಶೇಷ ಇನ್ಶೂರೆನ್ಸ್‌! ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲಿಬರ್ಟಿ ಜನರಲ್‌ ಇನ್ಶೂರೆನ್ಸ್ ಲಿಮಿಟೆಡ್ ( ಎಲ್‌ಜಿಐ) ಭಾರತದಲ್ಲಿ ಟೆಸ್ಲಾ ಕಾರುಗಳಿಗೆ ಹೆಚ್ಚು ಬೇಡಿಕೆಯ ವಿಮಾ ಸಂಸ್ಥೆಯಾಗಿ ಹೊರಹೊಮ್ಮಿದೆ. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಿದೆ. ಈ ಬೆನ್ನಲ್ಲೇ ಲಿಬರ್ಟಿ ಯ ಅಡ್ವಾನ್ಸ್ಡ್‌ ಇವಿ ಇನ್‌ಶ್ಯೂರೆನ್ಸ್‌ ಸೆಲ್ಯೂಶನ್‌ ಟೆಸ್ಲಾ ಕಾರು ಮಾಲೀಕರಿಗೆ ಬ್ರ್ಯಾಂಡ್‌ನ ನಾವೀನ್ಯತೆಗೆ ಅನುಗುಣವಾಗಿ ರೂಪಿಸಲಾದ ತಡೆರಹಿತ, ಭವಿಷ್ಯಕ್ಕೆ ಸಿದ್ಧವಾದ ರಕ್ಷಣೆಯನ್ನು ನೀಡುತ್ತಿದೆ.

ಟೆಸ್ಲಾ ಹಾಗೂ ಲಿಬರ್ಟಿ ಇನ್ಶೂರೆನ್ಸ್‌ ಒಂದು ಸಹಕಾರಯುಕ್ತ ದೃಷ್ಟಿಕೋನವನ್ನು ಹಂಚಿಕೊಂಡಿದೆ. ವಾಹನ ಮಾಲಿಕತ್ವವನ್ನು ಕ್ರಿಯಾತ್ಮಕ ಡಿಸೈನ್, ಡಿಜಿಟಲ್‌ ಆದ್ಯತೆಯ ಬೆಂಬಲ ಹಾಗೂ ಉನ್ನತಿ ಹೊಂದುತ್ತಿರುವ ಎಲೆಕ್ಟ್ರಿಕ್ ಮೊಬಿಲಿಟಿ ವಿಸ್ತಾರವನ್ನು ಬಿಂಬಿಸುವ ವಿಚಾರದೊಂದಿಗೆ ಮರುವ್ಯಾಖ್ಯಾನಿಸುತ್ತಿದೆ. ಟೆಸ್ಲಾದ ಎಂಜಿನಿಯರಿಂಗ್ ಹಾಗೂ ಕಾರ್ಯಕ್ಷಮತೆಯ ಉತ್ಕೃಷ್ಟತೆ ಮತ್ತು ಇವಿ ವಾಹನ ಬಳಕೆದಾರರ ಭವಿಷ್ಯದ ಆದ್ಯತೆಯನ್ನು ಗಮನದಲ್ಲಿರಿಸಿ ಸುರಕ್ಷತಾ ಯೋಜನೆಗಳನ್ನು ಲಿಬರ್ಟಿ ರೂಪಿಸಿದೆ.

ವಿಮೆಯ ಪ್ರಮುಖ ಸೌಲಭ್ಯಗಳು

ಇವಿ ಸುರಕ್ಷತೆ : ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪರಿಕರಗಳು,ವಾಲ್ ಮೌಂಟೆಡ್ ಯುನಿಟ್, ಕೇಬಲ್, ಅಡಾಪ್ಟರ್‌ಗಳಂತಹ ಸೌಕರ್ಯಗಳಿಗೂ ವಿಮಾ ಸುರಕ್ಷತೆ

ಬ್ಯಾಟರಿ ಸುರಕ್ಷತೆ : ಬ್ಯಾಟರಿ ಸುರಕ್ಷತೆಗೆ ಆಡ್‌ ಆನ್‌ ಕವರ್ ನೀಡುತ್ತಿದ್ದು ಇದರಲ್ಲಿ ರಿಪೇರಿ, ಬದಲಾವಣೆ, ದೀರ್ಘಾವಧಿ ಬ್ಯಾಟರಿ ಕಾರ್ಯಕ್ಷತೆಯ ಭರವಸೆಯ ಜೊತೆಗೆ ಕಾರು ಮಾಲೀಕರಿಗೆ ನೆಮ್ಮದಿಯ ಜೀವನ.

ಲಿಬರ್ಟಿ ಸಂಪೂರ್ಣ ನೆರವು : ಈ ಪ್ಯಾಕೇಜ್‌ ಇವಿ ಗಳಿಗೆ ಉತ್ತಮ ಗುಣಮಟ್ಟದ ರಸ್ತೆಬದಿ ನೆರವು ನೀಡುತ್ತದೆ. ಆನ್‌ ಸ್ಪಾಟ್ ಚಾರ್ಜಿಂಗ್, ಟೋಯಿಂಗ್, ಹೈಡ್ರಾ ಸರ್ವೀಸ್ , ತಾತ್ಕಾಲಿಕ ನಿಲ್ದಾಣ ಹಾಗೂ ಇನ್ನೀತರ ಪ್ರವಾಸ ವ್ಯವಸ್ಥೆಗಳನ್ನು ಒಳಗೊಂಡಿದೆ.

ಟೆಸ್ಲಾದ ಗ್ರಾಹಕರಿಗೆ ಲಿಬರ್ಟಿ ಜನರಲ್‌ ಇನ್‌ಶ್ಯೂರೆನ್ಸ್ ಆಡ್ ಆನ್ ಆಯ್ಕೆಗಳನ್ನು ಕೂಡ ನೀಡಿದ್ದು ಇದು ವಿಮಾ ರಕ್ಷಣೆಯ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರೀಮಿಯಂ ಆಡ್-ಆನ್ ಆಯ್ಕೆಗಳು :

ಫುಲ್ ಡಿಪ್ರಿಸಿಯೇಷನ್ ಶೀಲ್ಡ್

ಗ್ಯಾಪ್ ವಾಲ್ಯೂ ರಕ್ಷಣೆ

ಟೈರ್‌ಗಳು ಮತ್ತು ಇತರ ನಷ್ಟಪಡುವ ಉತ್ಪನ್ನಗಳ ವಿಮಾ

ಕೀ ರಿಪ್ಲೇಸ್‌ಮೆಂಟ್ ಕವರ್

ಪರ್ಸನಲ್ವಸ್ತುಗಳ ರಕ್ಷಣೆ

ಇಎಂಐ ಬೆಂಬಲ

ಪ್ಯಾಸೆಂಜರ್ ಸಹಾಯ ಸೇವೆಗಳು

ಈ ಕುರಿತು ಮಾತನಾಡಿದ ಲಿಬರ್ಟಿ ಜನರೆಲ್ ಇನ್‌ಶ್ಯೂರೆನ್ಸ್‌ನ ಸಿಇಒ ಹಾಗೂ ನಿರ್ದೇಶಕ ಪರಾಗ್ ವೇದ್  ಟೆಸ್ಲಾ ಭಾರತದ ಮಾರುಕಟ್ಟೆಗೆ ಪ್ರವೇಶಿಸುವುದು ಕೇವಲ ಒಂದು ಜಾಗತಿಕ ಕಾರು ಬ್ರ್ಯಾಂಡ್‌ನ ಆಗಮನವಲ್ಲ. ಇದು ಸಂಚಾರ ವ್ಯವಸ್ಥೆಯ ಹೊಸ ಅಧ್ಯಾಯ . ಟೆಸ್ಲಾದ ಪ್ರಮುಖ ಇನ್‌ಶ್ಯೂರೆನ್ಸ್‌ ಕೊಡುಗೆದಾರರಾಗಿರುವುದು ನಮಗೆ ಹೆಮ್ಮೆಯ ವಿಷಯ . ನಾವು ಇದನ್ನು ಪರಿವರ್ತನೆಯ ಕ್ಷಣವೆಂದು ಪರಿಗಣಿಸುತ್ತೇವೆ. ಮುಂದಿನ ಪೀಳಿಗೆಯ ವಾಹನ ಚಾಲಕರ ಅಗತ್ಯಗಳನ್ನು ಹೇಗೆ ರಕ್ಷಿಸುತ್ತೇವೆ, ಸೇವೆ ಸಲ್ಲಿಸುತ್ತೇವೆ ಮತ್ತು ಅಗತ್ಯತೆಗಳನ್ನು ನಿರೀಕ್ಷಿಸುತ್ತೇವೆ ಎಂಬುದರಲ್ಲಿಯೂ ಸಹ ಪರಿವರ್ತನೆ ಕಾಣುತ್ತಿದೆ.

ವಿದ್ಯುತ್ ವಾಹನ ಚಾಲನಾ ಅನುಭವಕ್ಕೆ ಪೂರಕವಾಗಿ ಇವಿ ಕೇಂದ್ರಿತ ಕೊಡುಗೆಗಳನ್ನು ಮೂಲದಿಂದಲೇ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಅದು ಹೈ-ವೋಲ್ಟೇಜ್ ಬ್ಯಾಟರಿಗಳನ್ನು ರಕ್ಷಿಸುವುದಾಗಲಿ, ರಸ್ತೆಬದಿಯ ರೀಚಾರ್ಜಿಂಗ್ ಅನ್ನು ನೀಡುವುದಾಗಲಿ ಅಥವಾ ನಮ್ಮ ಡಿಜಿಟಲ್-ಮೊದಲ ವೇದಿಕೆಯ ಮೂಲಕ ಕ್ಲೈಮ್‌ಗಳನ್ನು ಸರಳಗೊಳಿಸುವುದಾಗಲಿ, ನಾವು ಹೆಚ್ಚು ಅರ್ಥಗರ್ಭಿತ, ಉನ್ನತ ಭವಿಷ್ಯಕ್ಕಾಗಿ ವಿಮೆಯನ್ನು ಮರುಕಲ್ಪಿಸಿದ್ದೇವೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!