PVR, INOX ನಿಂದ ಸ್ಪೆಷಲ್ ಆಫರ್: ದೊಡ್ಡ ಪರದೆಯಲ್ಲೇ ನೋಡಿ ‘ಪ್ರಾಣಪ್ರತಿಷ್ಠೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ದಿನಗಳಲ್ಲಿ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯ ನಡೆಯಲಿದೆ. ಶಾಲೆಗಳಲ್ಲಿ, ಕಚೇರಿಗಳಲ್ಲಿ ಮತ್ತಿತರ ಸ್ಥಳಗಳಲ್ಲಿ ಪ್ರಾಣಪ್ರತಿಷ್ಠೆ ಲೈವ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಈ ಮಧ್ಯೆ ಪಿವಿಆರ್ ಹಾಗೂ ಐನಾಕ್ಸ್ ಕೂಡ ತಮ್ಮ ಕಡೆಯಿಂದ ಭರ್ಜರಿ ಆಫರ್ ನೀಡಿದೆ. ದೊಡ್ಡಪರದೆಯಲ್ಲಿ ನೀವು ಕೂಡ ಶ್ರೀರಾಮಲಲಾ ಪ್ರಾಣಪ್ರತಿಷ್ಠೆಯನ್ನು ಕಣ್ಣುತುಂಬಿಕೊಳ್ಳಬಹುದು.

Imageಪಿವಿಆರ್ ಹಾಗೂ ಐನಾಕ್ಸ್ ದೇಶದ ಪ್ರಮುಖ 70 ನಗರಗಳಲ್ಲಿ 170ಕ್ಕೂ ಅಧಿಕ ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲಿದೆ.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ದೊಡ್ಡ ಪರದೆಯಲ್ಲಿ ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ನೋಡಬಹುದಾಗಿದೆ. ಇದರ ಬೆಲೆ ನೂರು ರೂಪಾಯಿ ಮಾತ್ರ. ವಿಶೇಷವೆಂದರೆ ಲೈವ್ ವೀಕ್ಷಿಸಲು ಬರುವವರಿಗೆ 100 ರೂಪಾಯಿ ಟಿಕೆಟ್ ದರದಲ್ಲಿ ಕೂಲ್ ಡ್ರಿಂಕ್ಸ್ ಹಾಗೂ ಪಾಪ್‌ಕಾರ್ನ್ ಕೂಡ ನೀಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!