ಹೊಸದಿಗಂತ ವರದಿ, ಬೆಂಗಳೂರು:
ನಗರ ಸಂಚಾರ ಪೊಲೀಸರಿಂದ ಶಾಲಾ ವಾಹನಗಳ ವಿರುದ್ಧ ವಿಶೇಷ ಸಂಚಾರ ನಿಯಮ ಉಲ್ಲಂಘಿಸಿದ 338 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಇತ್ತೀಚೆಗೆ ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುವವರ ಪ್ರಕರಣಗಳು ಹೆಚ್ಚಾಗಿರುವ ಕುರಿತು ಠಾಣೆಗೆ ಬಂದ ದೂರಿನ ಮೇರೆಗೆ ಪೊಲೀಸರು ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುವ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಂಚಾರ ಪೊಲೀಸರು, ಫೆ. 21ರಂದು ಬೆಳಗ್ಗೆ 7.30ರಿಂದ 9.30ವರೆಗೆ ಒಟ್ಟು 2059 ಶಾಲಾ ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದಾಗ ಆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ. ಹಾಗಾಗಿ ಅಂತಹವರ ವಿರುದ್ಧ 7 ಪ್ರಕರಣಗಳು ಹಾಗೂ ಹೆಚ್ಚುವರಿ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಚಾಲಕರ ವಿರುದ್ಧ 331 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಜವಾಬ್ದಾರಿಯಿಂದ ವಾಹನಗಳನ್ನು ಚಲಾಯಿಸುವುದಾಗಿ ತಿಳಿಸಿ, ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸಬೇಡಿ ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸರು ಜಾಗೃತಿ ಮೂಡಿಸಿ ದಂಡ ವಿಧಿಸಿದರು.