ಗೋಕರ್ಣ ಕ್ಷೇತ್ರದಲ್ಲಿ ಶಿವನಿಗೆ ವಿಶೇಷ ಪೂಜಾ ಕೈಂಕರ್ಯ ಆರಂಭ

ಹೊಸದಿಗಂತ ವರದಿ, ಗೋಕರ್ಣ:

ಸರ್ವೋಚ್ಚ ನ್ಯಾಯಾಲಯವು ನೇಮಿಸಿದ ಮೇಲುಸ್ತುವಾರಿ ಸಮಿತಿಯ ಮಾರ್ಗದರ್ಶನದಲ್ಲಿ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಧಾರ್ಮಿಕ ಆಚರಣೆಗಳು, ಉತ್ಸವ, ಪೂಜೆ ಕೈಂಕರ್ಯಗಳು ನೆರವೇರುತ್ತಿವೆ.
ಶಿವಯೋಗದ ಪುಣ್ಯಪರ್ವ ಕಾಲದಲ್ಲಿ 01-03-2022, ಮಂಗಳವಾರ ಬೆಳಗಿನ ಜಾವ 2:00 ಗಂಟೆಯಿಂದ ದರ್ಶನ – ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಭಕ್ತಾದಿಗಳು ಆತ್ಮಲಿಂಗ ದರ್ಶನ ಪಡೆಯುತ್ತಿದ್ದಾರೆ. ಅರ್ಚಕರಾದ ವೇ. ಕೃಷ್ಣ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿತ್ತಿರುವರು.
ಆಗಮಿಸಿದ ಭಕ್ತರಿಗೆ ಅಮೃತಾನ್ನದಲ್ಲಿ ವಿಶೇಷ ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿದೆ. ರಾಜ್ಯ-ಹೊರರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಆತ್ಮಲಿಂಗರೂಪಿ ಮಹಾಬಲೇಶ್ವರ ದೇವರನ್ನು ಅರ್ಚಿಸಿ ಪುನೀತರಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!