CHANDRAYAAN 3| ಯಶಸ್ವಿ ಉಡಾವಣೆಗೆ ಹಿಂದೂ ಜಾಗೃತಿ ಸೇನೆಯಿಂದ ವಿಶೇಷ ಪೂಜೆ

ಹೊಸದಿಗಂತ ವರದಿ ಕಲಬುರಗಿ:

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇಸ್ರೋ ವಿಜ್ಞಾನಿಗಳು ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಉಡಾವಣೆಗೆ ಸಜ್ಜಾಗಿದ್ದು, ಉಡಾವಣೆ ಯಶಶ್ವಿಯಾಗಲೆಂದು ಹಿಂದೂ ಜಾಗೃತಿ ಸೇನೆ ಕಲಬುರಗಿ ಘಟಕದ ವತಿಯಿಂದ ವಿಶೇಷ ಪೂಜೆ ನೆರವೆರಿಸಲಾಗಿದೆ.

ಶುಕ್ರವಾರ ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ ನೇತೃತ್ವದಲ್ಲಿ ವಿಶೇಷ ಪೂಜೆ ಮಾಡಿ,ಇಂದು ಮಧ್ಯಾಹ್ನ 2-35ಕ್ಕೆ ಉಡಾವಣೆಗೆ ಸಜ್ಜಾಗಿರುವ ಚಂದ್ರಯಾನ-3 ಯಶಸ್ಸು ಕಾಣಲಿ ಎಂದು ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಮಲ್ಲಿಕಾರ್ಜುನ ಡೋಲೆ, ದಶರಥ ಇಂಗೋಳೆ, ರಾಜು ಕಮಲಾಪುರೆ, ಪ್ರಕಾಶ್ ವಾಘಮೋರೆ,ಚಿದಾನಂದ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!