ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗದ ಅಭಿವೃದ್ಧಿಗಾಗಿ ಕಲಾವಿದರ ಸಂಘದಲ್ಲಿ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಒಕ್ಕೂಟದಲ್ಲಿ ಪೂಜೆ ನಡೆದಿದೆ. ಹಿರಿಯ ನಟಿಯರಾದ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಮತ್ತಿತರರು ದೀಪಾ ಬೆಳಗಿ ಪೂಜೆಯನ್ನು ಉದ್ಘಾಟಿಸಿದರು.
ದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆ ನಡೆಸಿಕೊಡಲಿದ್ದಾರೆ. ಗಣಪತಿ ಹೋಮದಿಂದ ಪೂಜೆ ಆರಂಭವಾಯಿತು. ಎಂಟು ಪುರೋಹಿತರ ವಿಶೇಷ ತಂಡ ಪೂಜೆಯಲ್ಲಿ ಆಗಮಿಸಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ತಂತ್ರಜ್ಞರು, ಕಲಾವಿದರು ಸೇರಿ 600 ಮಂದಿ ಉಪಸ್ಥಿತರಿದ್ದರು.