ಹಿಂದು ಧರ್ಮದ ಪ್ರಕಾರ, ಪ್ರದಕ್ಷಿಣೆ ಮಾಡದೆ ದೇವಾಲಯಕ್ಕೆ ಭೇಟಿ ನೀಡುವುದು ಅಪೂರ್ಣ, ಅಂದರೆ ಭಾರತದಲ್ಲಿ ಹಿಂದು ಸಮಾರಂಭಗಳಲ್ಲಿ ಪೂಜೆಯ ಒಂದು ರೂಪವಾಗಿ ವೃತ್ತಾಕಾರವಾಗಿ ಸುತ್ತುವುದನ್ನು ಪ್ರದಕ್ಷಿಣೆ ಎನ್ನುತ್ತಾರೆ. ಪ್ರದಕ್ಷಿಣೆ ಎಂಬ ಪದದ ಅಕ್ಷರಶಃ ಅರ್ಥ ‘ಬಲಕ್ಕೆ’ ಎಂದು. ಆದ್ದರಿಂದ, ಪ್ರದಕ್ಷಿಣೆ ಮಾಡುವಾಗ, ಗರ್ಭಗುಡಿಯ ಸುತ್ತ ದೇವರು ಬಲಭಾಗದಲ್ಲಿ ಇರುವಂತೆ ಎಡಭಾಗಕ್ಕೆ ಹೋಗಬೇಕಾಗುತ್ತದೆ.
ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವಾಗ ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು. ಯಾವ ಸಮಯದಲ್ಲಿ ಹಾಕಬೇಕು ಯಾವ ದಿಕ್ಕಿನಿಂದ ಪ್ರದಕ್ಷಿಣೆ ಹಾಕಿದರೆ ಸೂಕ್ತ ಹಾಗೂ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಿದ್ದಾರೆ ನಮಗೆ ಒಳ್ಳೆಯದಾಗುತ್ತೆ ಅನ್ನುವುದನ್ನೆಲ್ಲಾ ಹಿಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳನ್ನು ತಿಳಿದುಕೊಳ್ಳೋಣ.
ದೇವರ ಸುತ್ತಲೂ ಮಾಡುವ ಪ್ರತಿಯೊಂದು ಪ್ರದಕ್ಷಿಣೆಯು ನಮ್ಮ ಪಾಪಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ. ಮೊದಲ ಪ್ರದಕ್ಷಿಣೆಯು ಮನಸ್ಸಿನಿಂದ ಮಾಡಿದ ಪಾಪಗಳನ್ನು ನಾಶಪಡಿಸುತ್ತದೆ. ಎರಡನೆಯದು ಮಾತಿನಲ್ಲಿ ಮಾಡಿದ ಪಾಪಗಳನ್ನು ನಾಶಪಡಿಸುತ್ತದೆ ಮತ್ತು ಮೂರನೆಯದು ದೇಹದಿಂದ ಮಾಡಿದ ಪಾಪಗಳನ್ನು ನಾಶಪಡಿಸುತ್ತದೆ.
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ: ಧರ್ಮಗ್ರಂಥಗಳ ಪ್ರಕಾರ, ಪ್ರದಕ್ಷಿಣೆಗಳ ಸಂಖ್ಯೆಯು ದೇವತೆಯನ್ನು ಅವಲಂಬಿಸಿರುತ್ತದೆ. ಗಣೇಶನಿಗೆ ಮೂರು, ಹನುಮಾನ್ ಮತ್ತು ವಿಷ್ಣುವಿನಮೂರ್ತಿಗೆ ಐದು ಮತ್ತು ವಿಷ್ಣುವಿನ ಅವತಾರಗಳಿಗೆ ನಾಲ್ಕು. ಸೂರ್ಯ ದೇವರಿಗೆ, ಎರಡು ಪ್ರದಕ್ಷಿಣೆಗಳನ್ನು ಹಾಕಬೇಕು. ಅರಳಿ ಮರದ ಸುತ್ತಲೂ 108 ಪ್ರದಕ್ಷಿಣೆಗಳು, ನವಗ್ರಹ ದೇವಾಲಯಗಳಿಗೆ ಕನಿಷ್ಠ ಮೂರು ಪ್ರದಕ್ಷಿಣೆಗಳು ಹಾಕಬೇಕಾಗುತ್ತದೆ.
ಸ್ವಯಂಭೂಯಾಗಮದ ಪ್ರಕಾರ, ಒಂದು ದಿನದಲ್ಲಿ ಇಪ್ಪತ್ತೊಂದು ಪ್ರದಕ್ಷಿಣೆಗಳು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.