ಬೇಕಾಗುವ ಪದಾರ್ಥ:
1/4 ಹೀರೇಕಾಯಿ
ಅರ್ಧ ತೆಂಗಿನಕಾಯಿ
5 ಹಸಿಮೆಣಸಿನಕಾಯಿ,
ಹುಣಸೆ ಹಣ್ಣು
ಉಪ್ಪು
ಸಾಸಿವೆ
ಎಣ್ಣೆ
ಮಾಡುವ ವಿಧಾನ :
ಹೀರೆಕಾಯಿ ಸಿಪ್ಪೆ ತೆಗೆದು ತಿರುಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಹೀರೇಕಾಯಿ, ಮೆಣಸಿನಕಾಯಿ ಹುರಿಯಿರಿ. ಹುರಿದ ಮೇಲೆ ಉಪ್ಪು, ಹುಣಸೆಹಣ್ಣು ಹಾಕಿಕೊಂಡು ಒರಳಿನಲ್ಲಿ ರುಬ್ಬುವುದು. ರುಬ್ಬಿದ ಬಳಿಕ ಸಾಸಿವೆ ಜೊತೆ ಒಗ್ಗರಣೆ ಕೊಡಿ. ಹೀರೆಕಾಯಿ ಚಟ್ನಿ ಸವಿಯಲು ಸಿದ್ದ.