ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯ್ತು.
ಈ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 16 ಓವರ್‌ಗಳಲ್ಲಿ 166 ರನ್ ಹೊಡೆದು ಜಯ ಸಾಧಿಸಿತು.
ಡೆಲ್ಲಿ ಪರ ಫಾಫ್ ಡುಪ್ಲೆಸಿಸ್ ಆರಂಭದಲ್ಲೇ ಅಬ್ಬರಿಸಿದರು. ಡುಪ್ಲೆಸಿಸ್ ಮತ್ತು ಮೆಕ್‌ಗುರ್ಕ್ ಮೊದಲ ವಿಕೆಟಿಗೆ 55 ಎಸೆತಗಳಲ್ಲಿ 81 ರನ್ ಜೊತೆಯಾಟವಾಡಿದರು. ಡುಪ್ಲೆಸಿಸ್ 50 ರನ್ ಹೊಡೆದರೆ ಮೆಕ್‌ಗುರ್ಕ್ 38 ರನ್ ಹೊಡೆದು ಔಟಾದರು. ನಂತರ ಬಂದ ನಾಯಕ ಕೆಎಲ್ ರಾಹುಲ್ 15 ರನ್ ಹೊಡೆದು ಪೆವಿಲಿಯನ್ ಸೇರಿದರು.
ಅಂಕಪಟ್ಟಿಯಲ್ಲಿ ಸತತ 2 ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ ಡೆಲ್ಲಿ 2 ಸ್ಥಾನಕ್ಕೆ ಜಿಗಿಯಿತು. ಮೂರು ಪಂದ್ಯಗಳ ಪೈಕಿ 1 ಜಯ ಎರಡರಲ್ಲಿ ಸೋಲು ಸಂಪಾದಿಸಿದ ಹೈದರಾಬಾದ್ ಏಳನೇ ಸ್ಥಾನಕ್ಕೆ ಜಾರಿದೆ.