ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರೀದೇವಿ ಜೀವನ ಆಧಾರಿತ ಸಿನಿಮಾ ತೆರೆ ಮೇಲೆ ಬರಲಿದೆ. ಇಂದಿಗೂ ಶ್ರೀದೇವಿ ಹೊಟೇಲ್‌ವೊಂದರ ಬಾತ್‌ಟಬ್‌ನಲ್ಲಿ ಮೃತಪಟ್ಟಿದ್ದು ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಇದೆಲ್ಲದಕ್ಕೂ ಸಿನಿಮಾದಲ್ಲಿ ಉತ್ತರ ಸಿಗಲಿದೆ.
ಶ್ರೀದೇವಿ ಪಾತ್ರದಲ್ಲಿ ನಟಿಸೋಕೆ ನಟಿ ಪೂಜಾ ಹೆಗ್ಡೆಗೆ ಆಫರ್ ಹೋಗಿದೆ ಎನ್ನಲಾಗಿದೆ. ಈ ಬಗ್ಗೆ ಪೂಜಾ ಹೆಗ್ಡೆ ಮಾತನಾಡಿದ್ದು, ಶ್ರೀದೇವಿ ಪಾತ್ರ ಮಾಡೋದು ಕಷ್ಟ, ಬಟ್ ತುಂಬಾ ಇಷ್ಟ ಎಂದು ಹೇಳಿದ್ದಾರೆ. ನಾನು ಈಗಾಗಲೇ ಶ್ರೀದೇವಿಯ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ, ಶ್ರೀದೇವಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ನಟಿ.
ಬಯೋಪಿಕ್ ಸಿನಿಮಾಗಳಲ್ಲಿ ಈವರೆಗೆ ನಾನು ನಟಿಸಿಲ್ಲ. ಆದರೆ ನಿಜ ಜೀವನದ ಹೀರೋ ಆಗಿರುವ ವ್ಯಕ್ತಿಗಳನ್ನು ತೆರೆಯ ಮೇಲೆ ಪ್ರತಿಬಿಂಬಿಸುವುದು ಆಸಕ್ತಿದಾಯಕ ಎನಿಸುತ್ತದೆ. ಅದರ ಜೊತೆಗೆ ಕ್ರೀಡಾ ಕತೆಗಳನ್ನು ಹೊಂದಿರುವ ಸಿನಿಮಾಗಳಲ್ಲಿಯೂ ನಟಿಸುವ ಆಸೆ ನನಗೆ ಇದೆ ಎಂದಿದ್ದಾರೆ.