ಸಂವಿಧಾನ ತಿದ್ದುಪಡಿ ಮೂಲಕ ನೂತನ ಸರ್ಕಾರ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ ಶ್ರೀಲಂಕಾ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾದಲ್ಲಿ ಪರಿಸ್ಥಿತಿ ನಿಭಾಯಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನೂತನ ಪ್ರಧಾನಿಯನ್ನು ನೇಮಕ ಮಾಡುವುದಾಗಿ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಹೇಳಿದ್ದಾರೆ.
ಸಂಸತ್ತಿಗೆ ಮತ್ತಷ್ಟು ಅಧಿಕಾರ ನೀಡಲು ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ತಿದ್ದುಪಡಿಯ ವಿಷಯಗಳನ್ನು ಮರು ಜಾರಿಮಾಡುವ ಮೂಲಕ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಮತ್ತು ಜನರ ವಿಶ್ವಾಸವನ್ನು ಗಳಿಸುವ ಪ್ರಧಾನಿಯನ್ನು ಈ ವಾರದೊಳಗೆ ನೇಮಕ ಮಾಡಲಾಗುತ್ತದೆ ಎಂದು ಗೋಟಬಯ ಘೋಷಿಸಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಮಾತನಾಡಿರುವ ಅವರು “ದೇಶವು ಅರಾಜಕತೆಗೆ ಬೀಳದಂತೆ ತಡೆಯಲು ಮತ್ತು ಸ್ಥಗಿತಗೊಂಡಿರುವ ರಾಜ್ಯದ ವ್ಯವಹಾರಗಳನ್ನು ನಿರ್ವಹಿಸಲು ಹೊಸ ಸರ್ಕಾರವನ್ನು ರಚಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಂಸತ್ತಿನಲ್ಲಿ ಬಹುಮತವನ್ನು ಸಾಬೀತುಗೊಳಿಸಿದ ಮತ್ತು ಜನರ ವಿಶ್ವಾಸವನ್ನು ಪಡೆಯಲು ಸಮರ್ಥವಾಗಿರುವ ಪ್ರಧಾನಿಯನ್ನು ಈ ವಾರದೊಳಗೆ ನೇಮಿಸಲಾಗುವುದು” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಲು ಸಹಕರಿಸಬೇಕು ಎಂದು ಅವರು ದೇಶದ ಪ್ರಜೆಗಳಲ್ಲಿ ವಿನಂತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!