ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನಿಗಳ ಕಣ್ಣೀರನ್ನು ಕಂಡು ಶ್ರೀರಾಮುಲು ಭಾವುಕರಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲನುಭವಿಸಿರುವ ಶ್ರೀರಾಮುಲು ಅವರ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿರೋ ವಿಡಿಯೋ ಭಾರೀ ವೈರಲ್ ಆಗಿದೆ.
ಶ್ರೀರಾಮುಲು ಕಾಲು ಹಿಡಿದು ಕೊಂಡು ನಿಮಗೆ ಅನ್ಯಾಯ ಮಾಡಿಬಿಟ್ಟೆವು ಎಂದು ಅಭಿಮಾನಿಗಳು ಅತ್ತಿದ್ದಾರೆ. ಅಭಿಮಾನಿಗಳನ್ನ ಸಮಾಧಾನ ಮಾಡುವ ವೇಳೆ ಶ್ರೀರಾಮುಲು ಕೂಡ ಭಾವುಕರಾಗಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲಿನ ನಂತರ ಮಾಜಿ ಸಚಿವ ಶ್ರೀರಾಮುಲು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಮೋಕಾ ಗ್ರಾಮಕ್ಕೆ ಭೇಟಿ ನೀಡಿದ್ದು ಅಭಿಮಾನಿಗಳು, ಬೆಂಬಲಿಗರ ಕಣ್ಣೀರು ಹಾಕಿದರು. ಆಗ ಅವರನ್ನು ಸಮಾಧಾನಪಡಿಸುವ ವೇಳೆ ಶ್ರೀರಾಮುಲು ಕೂಡ ಭಾವುಕರಾಗಿದ್ದಾರೆ.