ಹೊಸದಿಗಂತ ವರದಿ ಶ್ರೀರಂಗಪಟ್ಟಣ :
ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಂಗವಾಗಿ ಪಟ್ಟಣದ ಸ್ನಾನಘಟ್ಟದಲ್ಲಿನ ಕಾವೇರಿ ಮಾತೆಗೆ ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ 15ಕ್ಕೂ ಹೆಚ್ಚು ವೈದಿಕರ ತಂಡದೊಂದಿಗೆ ಕಾವೇರಿ ಆರತಿಗೆ ಜಿಲ್ಲಾಡಳಿತ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ಕುಮಾರ್ ನೇತೃತ್ವದಲ್ಲಿ ವೇದಬ್ರಹ್ಮ ಡಾ. ಭಾನುಪ್ರಕಾಶ್‌ಶರ್ಮಾ ಸಾರಥ್ಯದ ವೈದಿಕರ ತಂಡವು ಇಲ್ಲಿನ ಕಾವೇರಿ ನದಿಗೆ ವಿಧಿ ವಿಧಾನಗಳ ಮೂಲಕ ಗಂಧದಕಟ್ಟಿ ಪೂಜೆ, ದೂಪಾರತಿ, ಕರ್ಪೂರದ ಆರತಿ ಬೆಳಗಿ ಕಾವೇರಿ ಮಾತೆಗೆ ನಮನ ಸಲ್ಲಿಸಿದರು.
ಗಣಪತಿ ಪಾರ್ಥನೆ, ಅಸ್ಟೋತ್ತರ ಪೂಜೆ, ದೂಪ ದೀಪಗಳೊಂದಿಗೆ ಕಾವೇರಿ ಮಾತೆಗೆ ಸಂಕಲ್ಪ ಮಾಡಲಾಯಿತು. ಪಟ್ಟಣದಲ್ಲಿ ದಸರ ಮಹೋತ್ಸವ ನಡೆಯುವ ಹಾಗೆ ಕಾವೇರಿ ನದಿಗೆ ಅ.3 ರಿಂದ 5 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.