ಹೊಸದಿಗಂತ ವರದಿ ಹುಬ್ಬಳ್ಳಿ:
ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಹಗ್ಗೇರಿ ನಿವಾಸಿ ಹಾಗೂ ಆಟೋ ಚಾಕಲನಾದ ಮಲ್ಲೀಕ್ ಅದೋನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಸ್‌ಐ ವಿಶ್ವನಾಥ ಆಲದಮಟ್ಟಿ ಮತ್ತು ಕಾನ್‌ಸ್ಟೆಬಲ್ ಶರೀಫ ನದಾಫ್ ಗಾಯಗೊಂಡಿದ್ದಾರೆ. ಮೂವರನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮಲಿಕ್ ಸೇರಿ ಏಳು-ಎಂಟು ಮಂದಿಯ ಗುಂಪು, ಸೋಮವಾರ ರಾತ್ರಿ ಹೆಗ್ಗೇರಿ ಬಳಿ ಇರ್ಫಾನ್ ಎಂಬಾತನ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿತ್ತು. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿ ಮಲೀಕ್ ನನ್ನು ರಾಘವೇಂದ್ರ ಕಾಲೊನಿ ಸ್ಮಶಾನ ಬಳಿ ಸೋಮವಾರ ವಶಕ್ಕೆ ಪಡೆಯಲು ತೆರಳಿದಾಗ, ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿ ನಂತರ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.