ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರ ನಟ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ನಡೆದ ದಾಳಿಯ ತನಿಖೆಯ ಭಾಗವಾಗಿ ಮುಂಬೈ ಪೊಲೀಸರು ತನಿಖೆಗಾಗಿ ಅವರ ರಕ್ತದ ಮಾದರಿ ಮತ್ತು ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ.
ದಾಳಿಯ ವೇಳೆ ಸೈಫ್ ಅಲಿಖಾನ್ ಧರಿಸಿದ್ದ ಬಟ್ಟೆಗಳನ್ನು ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಗಳ ರಿಮಾಂಡ್ ಪ್ರತಿ ಹೇಳುತ್ತದೆ. ಇದಲ್ಲದೇ ಘಟನೆ ನಡೆದ ರಾತ್ರಿ ಆರೋಪಿ ಶರೀಫುಲ್ ಇಸ್ಲಾಂ ಧರಿಸಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಇದಕ್ಕಾಗಿ ಸೈಫ್ ಅಲಿ ಖಾನ್ ಅವರ ರಕ್ತದ ಮಾದರಿಯನ್ನೂ ಸಂಗ್ರಹಿಸಲಾಗಿದೆ.
ಸೈಫ್ನ ರಕ್ತದ ಮಾದರಿಗಳು ಮತ್ತು ಬಟ್ಟೆಗಳು ಮತ್ತು ದಾಳಿಕೋರನ ಬಟ್ಟೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದ್ದು, ದಾಳಿಕೋರನ ಬಟ್ಟೆಯ ಮೇಲೆ ಗೋಚರಿಸುವ ರಕ್ತದ ಕಲೆಗಳು ನಟನದ್ದೇ ಎಂದು ಸಾಬೀತುಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಚೂರಿ ಇರಿತ ಪ್ರಕರಣದಲ್ಲಿ ಹೆಚ್ಚಿನ ಸಹಚರರು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿ ಮುಂಬೈ ಪೊಲೀಸರು ಆರೋಪಿಯನ್ನು ಹೆಚ್ಚಿನ ಕಸ್ಟಡಿಗೆ ಕೋರಿದ್ದರು.