ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರವು ರಾಜ್ಯದ ಹಕ್ಕುಗಳನ್ನು ಕ್ರಮೇಣ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರಾಜ್ಯ ಸ್ವಾಯತ್ತತೆ ಕುರಿತು ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗುವುದು. ರಾಜ್ಯ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ವಿವರವಾಗಿ ಪರಿಶೀಲಿಸಿ, ಜನವರಿ 2026 ರಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ಇನ್ನು ರಚಿಸಲಾಗುವ, ಸಮಿತಿಯ ಗುರಿಯು ರಾಜ್ಯ ಸರ್ಕಾರಗಳ ಏಕೈಕ ಅಧಿಕಾರಕ್ಕೆ ಸೀಮಿತವಾಗಿದ್ದ, ಆದರೆ ಈಗ ಕೇಂದ್ರ-ರಾಜ್ಯ ಜಂಟಿ ನಿರ್ವಹಣೆಗೆ ಒಳಪಟ್ಟಿರುವ ವಿಷಯಗಳನ್ನು ಮರಳಿ ಪಡೆಯುವ ಮಾರ್ಗಗಳನ್ನು ಸೂಚಿಸುವುದಾಗಿದೆ.