ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಓಷನ್ ಐಲ್ಯಾಂಡ್ ಗೇಮ್ಸ್ನ ಉದ್ಘಾಟನಾ ಸಮಾರಂಭಕ್ಕಾಗಿ ರಾಷ್ಟ್ರೀಯ ಕ್ರೀಡಾಂಗಣ ಪ್ರವೇಶಿಸುವ ವೇಳೆ ಕಾಲ್ತುಳಿತ ಉಂಟಾಗಿ 12ಜನ ಸಾವನ್ನಪ್ಪಿರುವ ಘಟನೆ ಮಡಗಾಸ್ಕರ್ನಲ್ಲಿ ನಡೆದಿದೆ. 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಅಥ್ಲೆಟಿಕ್ಸ್ ಟ್ರ್ಯಾಕ್ನ ಪಕ್ಕದಲ್ಲಿ ರೆಡ್ಕ್ರಾಸ್ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಿಸಿದರು.
ಶುಕ್ರವಾರ ಮಡಗಾಸ್ಕರ್ನ ರಾಜಧಾನಿ ಅಂಟಾನಾನರಿವೊ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 12 ಜನರು ಸಾವನ್ನಪ್ಪಿದ್ದು, ಗಾಯಗೊಂಡವರಲ್ಲಿ 11 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಪ್ರಧಾನಿ ಕ್ರಿಶ್ಚಿಯನ್ ಎನ್ಟ್ಸೆ ಹೇಳಿದ್ದಾರೆ. ಈ ಘಟನೆ ಹೇಗೆ ನಡೆದಿದೆ ಎಂಬುದು ತಿಳಿದಿಲ್ಲ. ದೇಶದ ಅಧಿಕಾರಿಗಳು ಕಾಲ್ತುಳಿತದ ಬಗ್ಗೆ ತನಿಖೆ ನಡೆಸುತ್ತಿರುವುದಾಘಿ ತಿಳಿಸಿದರು.
2019 ರಲ್ಲಿಯೂ ಮಹಾಮಸಿನಾ ಕ್ರೀಡಾಂಗಣದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದರು.