ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ ಉಂಟಾದ ಸಾವು-ನೋವು ನೆನೆದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. ಮಕ್ಕಳ ಸಾವು ನೆನೆದು ಗದ್ಗದಿತರಾಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಅವರು, ನನಗೆ ಹೊಟ್ಟೆ ಉರಿಯುತ್ತಿದೆ, ಆ ಮಕ್ಕಳ ತಾಯಿ ಮಾತನಾಡೋದನ್ನ ಸಹಿಸೋಕೆ ಆಗ್ತಾ ಇಲ್ಲ ಅಂತ ಕಣ್ಣೀರು ಹಾಕಿದ್ರು.
ಇದನ್ನ ಯಾವ ಫ್ಯಾಮಿಲಿ ಕೂಡ ತಡೆದುಕೊಳ್ಳಲ್ಲ. ಪೊಲೀಸ್ ಇಲಾಖೆ ಕೂಡಲೇ ಹೇಳ್ತು ಇದನ್ನ ತಡೆಯಿರಿ ಅಂತ. ನಾನೂ ಕೂಡಲೇ ಮ್ಯಾನೇಜ್ಮೆಂಟ್‌ಗೆ ಹೇಳಿದೆ, ಅವರು ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಕೂಡಲೇ ಅವರನ್ನ ನಾನು ಕಾರ್‌ನಲ್ಲಿ ಕೂರಿಸಿಕೊಂಡು ಹೋದೆ, ಮಾಧ್ಯದವರು ಹೇಳಿದ ಬಳಿಕವೇ ನಮಗೆ ಗೊತ್ತಾಯ್ತು ಎಂದು ತಿಳಿಸಿದ್ರು.